ಸೆಮಿಕಂಡಕ್ಟರ್ ಕೊರತೆಯಿಂದ ಕಾರು ಡೆಲಿವರಿಯಲ್ಲಿ ತಡ
ನವದೆಹಲಿ : ಸೆಮಿಕಂಡಕ್ಟರ್ ಕೊರತೆಯಿಂದ ದೇಶದ ವಾಹನೋದ್ಯಮನವು ೨೦೨೧ರ ಡಿಸೆಂಬರ್ ತಿಂಗಳಿನಲ್ಲಿ ಮಿಶ್ರಫಲ ಅನುಭವಿಸಿದೆ. ಕೆಲವು ಕಂಪನಿಗಳು ವಾಹನ ಮಾರಾಟದಲ್ಲಿ ಇಳಿಕೆ ಕಂಡರೆ ಕೆಲವು ವಾಹನಗಳು ಮಾರಾಟದಲ್ಲಿ ಏರಿಕೆ ಕಂಡಿದೆ.
ಸೆಮಿಕಂಡಕ್ಟರ್ ಅಭಾವದಿಂದ ಹೊಸ ಗಾಡಿಗಳ ಡೆಲಿವರಿ ಕೂಡ ತಡವಾಗ್ತಿದೆ. ಸಾಕಷ್ಟು ಕಾರುಗಳ ವೇಯ್ಟಿಂಗ್ ಟೈಮ್ ಕೂಡ ಹೆಚ್ಚಾಗಿದೆ. ಮಹೀಂದ್ರ XUV700 ಅನ್ನು ನೀವು ಈಗ ಬುಕ್ಕಿಂಗ್ ಮಾಡಿದರೆ ನಿಮಗೆ ಗಾಡಿ ಸಿಗೋದು ೮ ತಿಂಗಳ ನಂತರ.
ಮಾರುತಿ ಕಾರು ಹೊರತು ಪಡಿಸಿದರೆ ಮಿಕ್ಕೆಲ್ಲಾ ಕಾರುಗಳು ಕನಿಷ್ಠ 6 ರಿಂದ 8 ವಾರದ ವೇಯ್ಟಿಂಗ್ ಪೀರಿಯಡ್ ಹೊಂದಿವೆ.