InternationalLifestyle

ಪ್ರೀತಿ, ಪ್ರಣಯ ಇಲ್ಲದ ಮದುವೆ; ಬಂದಿದೆ ಹೊಸ ಟ್ರೆಂಡ್!

ಜಪಾನ್; ಮದುವೆ ಆಗದೆ ಒಟ್ಟಿಗೆ ಜೀವನ ಮಾಡುವ ಲಿವ್ ಇನ್ ರಿಲೇಷನ್ಶಿಪ್ ಈಗಾಗಲೇ ಭಾರತಕ್ಕೂ ಬಂದಿದೆ.. ಆದ್ರೆ ಇದೀಗ love, sex ಇಲ್ಲದ ಮದುವೆಗಳು ಹೆಚ್ಚು ಟ್ರೆಂಡ್ ಆಗುತ್ತಿವೆ.. ಜಪಾನ್ ನಲ್ಲಿ ಇಂತಹದೊಂದು ಪದ್ಧತಿ ಹೆಚ್ಚಾಗಿದ್ದು, ಭಾರತಕ್ಕೂ ಇದು ಕಾಲಿಡುವ ಸಾಧ್ಯತೆ ಹೆಚ್ಚಿದೆ.. ಜಪಾನ್ ಸರ್ಕಾರಕ್ಕೆ ಈ ಟ್ರೆಂಡ್ ಹೆಚ್ಚು ತಲೆನೋವು ತರಿಸಿದೆ..

  ಈ ಸಂಬಂಧದಲ್ಲಿ ಪ್ಯೂರ್ ಸ್ನೇಹ ಇರುತ್ತೆ.. Love, sex ಇರೋದಿಲ್ಲ.. ಆದ್ರೆ ಇಬ್ರು ಮದುವೆಯಾಗುತ್ತಾರೆ.. ಒಟ್ಟಿಗೆ ವಾಸ ಮಾಡುತ್ತಾರೆ.. ಸ್ನೇಹ ವಿವಾಹ ಅಂದ್ರೇನೆ ಸೆಕ್ಸ್​ ಅಥವಾ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಳ್ಳದೇ ಇಬ್ಬರು ಒಟ್ಟಿಗೆ ಇರುವುದು..

  ಜಪಾನ್ ನಲ್ಲಿ ಜನ ಸಂಖ್ಯೆ ಕಡಿಮೆ.. ಜನನ ಪ್ರಮಾಣವು ಕುಸಿಯುತ್ತಿದೆ.. ಹೀಗಿರುವಾಗ ಹೊಸ ಸ್ನೇಹ ಮದುವೆ ಜಪಾನ್ ಸರ್ಕಾರಕ್ಕೆ ತಲೆಬಿಸಿ ತಂದಿಟ್ಟಿದೆ..  ಒಂದೇ ಆಸಕ್ತಿಗಳು ಮತ್ತು ಆಲೋಚನೆಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ಅಥವಾ ಸ್ನೇಹಿತರು ಕಾನೂನುಬದ್ಧವಾಗಿ ಮದುವೆಯಾಗುತ್ತಾರೆ. ಆದರೆ ಅವರ ನಡುವೆ ಯಾವುದೇ ರೊಮ್ಯಾನ್ಸ್​ ಅಥವಾ ಸೆಕ್ಸ್​ ಇರುವುದಿಲ್ಲ.

ಇನ್ನು ಜಪಾನಿನಲ್ಲಿ ಇಂತಹ ಸ್ನೇಹ ವಿವಾಹಗಳನ್ನು ನಡೆಸುವ ಸಂಸ್ಥೆಗಳೂ ಇವೆ. ಜಪಾನ್‌ನ ಏಜೆನ್ಸಿಯೊಂದು 500 ಸ್ನೇಹ ವಿವಾಹಗಳನ್ನು ನಡೆಸಿದೆ ಎಂದು ಹೇಳಿಕೊಂಡಿದೆ.

Share Post