ಧರ್ಮಸ್ಥಳದ ಇತಿಹಾಸ ನಿಮಗೆ ಗೊತ್ತೇ..?; ಈ ಹೆಸರು ಬಂದಿದ್ದು ಹೇಗೆ..?
ಧರ್ಮಸ್ಥಳ; ಕರ್ನಾಟಕ ಪ್ರಮುಖ ಹಾಗೂ ಖ್ಯಾತಿ ಪಡೆದ ಸ್ಥಳವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ 800 ವರ್ಷಗಳ ಇತಿಹಾಸ ಇದೆ. ಶಿವನ ಧಾರ್ಮಿಕ ಕ್ಷೇತ್ರವಾದ ಈ ದೇಗುಲದಲ ಆಡಳಿತದ ನಡೆಸುತ್ತಿರುವವರು ಜೈನರು ಇದು ಇಲ್ಲಿನ ವಿಶೇಷ ಸಂಗತಿಯಾಗಿದೆ. ಕೇರಳ ದೇಗುಲದ ವಾಸ್ತುಶಿಲ್ಪ ಮಾದರಿಯಲ್ಲಿ ಶ್ರೀ ಮಂಜುನಾಥ ದೇವಾಲಯ ಇದೆ.
ನಡೆದು ಬಂದ ಕಥೆ ಅನುಸಾರ ಈ ಧರ್ಮಸ್ಥಳವನ್ನು ಹಿಂದೆ ಕುಡುಮಾ ಎಂದು ಕರೆಯಲಾಗುತ್ತಿತ್ತು. ಬಿರ್ಮಣ್ಣ ಪೆರ್ಗಡೆ ಮತ್ತು ಅವ ಪತ್ನಿ ಅಮ್ಮ ಬಲ್ಲಲ್ತಿ ಅವರು ಇಲ್ಲಿನ ನೆಲ್ಲಾಡಿ ಬೀಡು ಎಂಬಲ್ಲಿ ವಾಸಿಸುತ್ತಿದ್ದರು. ದಾನ ಧರ್ಮಕ್ಕೆ ಹೆಸರಾಗಿದ್ದ ಇವರಿಗೆ ಒಮ್ಮೆ ಧರ್ಮ ದೈವಗಳು ಕಾಣಿಸಿಕೊಂಡು ನೆಲ್ಲಾಡಿ ಬೀಡುವಿನಲ್ಲಿ ಧರ್ಮ ದೈವಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು. ಅಲ್ಲದೇ ಧರ್ಮವನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸುವಂತೆ ತಿಳಿಸಿದರು.
ನಡೆದು ಬಂದ ಕಥೆ ಅನುಸಾರ ಈ ಧರ್ಮಸ್ಥಳವನ್ನು ಹಿಂದೆ ಕುಡುಮಾ ಎಂದು ಕರೆಯಲಾಗುತ್ತಿತ್ತು. ಬಿರ್ಮಣ್ಣ ಪೆರ್ಗಡೆ ಮತ್ತು ಅವ ಪತ್ನಿ ಅಮ್ಮ ಬಲ್ಲಲ್ತಿ ಅವರು ಇಲ್ಲಿನ ನೆಲ್ಲಾಡಿ ಬೀಡು ಎಂಬಲ್ಲಿ ವಾಸಿಸುತ್ತಿದ್ದರು. ಅದರಂತೆ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇಗುಲದಿಂದ ಲಿಂಗ ತರುವಂತೆ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸಲಾಯಿತು. ಅಣ್ಣಪ್ಪ ತಂದ ವಿಗ್ರಹವನ್ನು ಧರ್ಮಸ್ಥಳದಲ್ಲಿ ಇಟ್ಟು ದೇಗುಲ ನಿರ್ಮಾಣ ಮಾಡಲಾಯಿತು. 16 ನೇ ಶತಮಾನದಲ್ಲಿ ಶ್ರೀ ದೇವರಾಜ ಹೆಗ್ಗಡೆ ಅವರು ಶ್ರೀ ವಾದಿರಾಜ ಸ್ವಾಮಿಯನ್ನು ಇಲ್ಲಿಗೆ ಬರಲು ಆಹ್ವಾನ ಮಾಡಿದರು. ಆದರೆ ವಾಡಿರಾಜ ಸ್ವಾಮಿಜಿ ಆಹಾರ ಸ್ವೀಕರಿಸಲು ನಿರಾಕರಿಸಿದರು ಏಕೆಂದರೆ ಶ್ರೀ ಮಂಜುನಾಥ ದೇವರ ವಿಗ್ರಹವನ್ನು ವೈದಿಕ ವಿಧಿಗಳ ಪ್ರಕಾರ ಪವಿತ್ರ ಮಾಡಿಲ್ಲ ಎಂದು.
ಬಳಿಕ ಹೆಗ್ಗಡೆಯವರ ಮನವಿ ಮೇರೆಗೆ ವಾದಿರಾಜ ಸ್ವಾಮಿಗಳು ಇಲ್ಲಿ ಶಿವಲಿಂಗವನ್ನು ಪವಿತ್ರಗೊಳಿಸಿದರು. ಅಲ್ಲದೆ, ಈ ಸ್ಥಳಕ್ಕೆ ಧರ್ಮಸ್ಥಳ ಎಂದು ಹೆಸರು ಇಟ್ಟು ಇಲ್ಲಿ, ಧಾನ ಧರ್ಮವನ್ನೇ ಆರಾಧಿಸಬೆಕು ಎಂದು ತಿಳಿಸಿದರು. ಅಂದಿನಿಂದ ಈ ಸ್ಥಳ ಧರ್ಮಸ್ಥಳ ಆಯಿತು. ಈ ದೇಗುಲ ನಿರ್ವಹಣೆ ಮಾಡುತ್ತಿದ್ದ ಪೆರ್ಗಡೆ ಕುಟುಂಬ ಈ ಕ್ಷೇತ್ರ ನಿರ್ವಹಣೆ ಮಾಡುತ್ತಿದೆ. ಈ ಕುಟುಂಬದ ಹಿರಿಯ ಸದಸ್ಯ ಧರ್ಮಾಧಿಕಾರಿಯ ಸ್ಥಾನವಹಿಸಿಕೊಂಡು ಹೆಗ್ಗಡೆ ಎಂಬ ಬಿರುದು ಪಡೆಯುತ್ತಾರೆ. ಈ ದೇಗುಲವನ್ನು ಪೆರ್ಗಡೆ ಕುಟುಂಬ 20 ತಲೆಮಾರುಗಳಿಂದ ಈ ದೇಗುಲವನ್ನು ನಿರ್ವಹಣೆ ಮಾಡುತ್ತಿದ್ದು, ದಾನ, ಧರ್ಮದ ಕಾರ್ಯದಲ್ಲಿ ನಿರತರಾಗಿದ್ದಾರೆ.