Bhadrachalam; ಭದ್ರಾಚಲಂ ಶ್ರೀರಾಮನ 6 ಕೆಜಿ ಬೆಳ್ಳಿ ಇಟ್ಟಿಗೆ ನಾಪತ್ತೆ..!
ಹೈದರಾಬಾದ್; ಭದ್ರಾಚಲಂ ತೆಲಂಗಾಣದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದು.. ಇಲ್ಲಿ ಶ್ರೀ ಸೀತಾರಾಮಚಂದ್ರಸ್ವಾಮಿ ನೆಲೆಸಿದ್ದಾರೆ… ನಿತ್ಯ ಸಾವಿರಾರು ಭಕ್ತರು ಶ್ರೀರಾಮನ ದರ್ಶನ ಪಡೆದುಕೊಳ್ಳುತ್ತಾರೆ… ಬೇಡಿದನ್ನೆಲ್ಲಾ ಕೊಡುವ ದೇವರು ಎಂದು ಕೋಟ್ಯಂತರ ಭಕ್ತರು ನಂಬಿದ್ದಾರೆ.. ಇಂತಹ ಪುಣ್ಯ ಕ್ಷೇತ್ರದಲ್ಲೇ ಕಳ್ಳತನ ನಡೆದಿದೆ.. ದೇವರಿಗೆ ಸೇರಿದ ಬೆಳ್ಳಿ ಇಟ್ಟಿಗೆಯೊಂದು ಕಾಣದಂತೆ ಮಾಯವಾಗಿದೆ…
ಇದನ್ನೂ ಓದಿ; Vaastu Tips; ತಿಂಗಳ ಮೊದಲ ದಿನ ಈ ವಸ್ತು ಖರೀದಿಸಿ; ಹಣದ ಹೊಳೆಯೇ ಹರಿಯುತ್ತೆ!
6 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ಮಾಯ;
6 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ಮಾಯ; ಭದ್ರಾಚಲ ಸೀತಾರಾಮ ದೇವಸ್ಥಾನಕ್ಕೆ ಸೇರಿದ ಸುಮಾರು 6 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ನಾಪತ್ತೆಯಾಗಿದೆ. ಅದು ಎಲ್ಲಿ ಹೋಗಿದೆ. ಯಾರು ತೆಗೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ. ಯಾವಾಗ ಕಳುವಾಗಿದೆ ಅನ್ನೋದು ಕೂಡಾ ಇನ್ನೂ ಗೊತ್ತಾಗಿಲ್ಲ.. ಬೆಳ್ಳಿ ಇಟ್ಟಿಗೆ ಕಳುವಾಗಿದ್ದು, ಅದರ ಪತ್ತೆಗೆ ಕ್ರಮ ವಹಿಸಿದ್ದೇವೆ ಎಂದು ದೇವಸ್ಥಾನದ ಸಿಇಒ ರಮಾದೇವಿ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ದೇಗುಲದ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದೇವೆ ಎಂದು ಆಭರಣ ಪರಿಶೀಲನಾ ಅಧಿಕಾರ ಅಂಜನಿದೇವಿ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ; Vaastu Tips; ಮನೆಯಲ್ಲಿ ಈ ಗಿಡ ಇದ್ದರೆ ಲಕ್ಷ್ಮೀ ಕೃಪೆ; ಹೂವು ಬಿಟ್ಟರೆ ಧನಯೋಗ!
ಸಂಬಂಧಪಟ್ಟ ಸಿಬ್ಬಂದಿಯಿಂದ ವಸೂಲಿ;
ಸಂಬಂಧಪಟ್ಟ ಸಿಬ್ಬಂದಿಯಿಂದ ವಸೂಲಿ; ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಬೆಳ್ಳಿ ಇಟ್ಟಿಗೆ ಪತ್ತೆಗೆ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇದರ ನಡುವೆ ಇಟ್ಟಿಗೆ ಪತ್ತೆಯಾಗದಿದ್ದಲ್ಲಿ ಸಂಬಂಧಪಟ್ಟ ಸಿಬ್ಬಂದಿಯಿಂದ ಮೊತ್ತ ವಸೂಲಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಜೊತೆಗೆ ಸಂಬಂಧಪಟ್ಟವರ ವಿರುದ್ಧ ಇಲಾಖಾ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
68 ಕೆಜಿ ಚಿನ್ನ, 980 ಕೆಜಿ ಬೆಳ್ಳಿ ಇದೆ;
68 ಕೆಜಿ ಚಿನ್ನ, 980 ಕೆಜಿ ಬೆಳ್ಳಿ ಇದೆ; ಮಾಹಿತಿ ಪ್ರಕಾರ ಈ ದೇಗುಲದಲ್ಲಿ ದೇವರಿಗೆ ಸಂಬಂಧಿಸಿದ 67.774 ಕೆಜಿ ಚಿನ್ನ ಹಾಗೂ 980.68 ಕೆಜಿ ಬೆಳ್ಳಿ ಇದೆ. ಇದರಲ್ಲಿ ದೇವರ ಆಭರಣಗಳು ಕೂಡಾ ಸೇರಿವೆ. 2009ರ ನಂತರ ಈಗ ದೇಗುಲದಲ್ಲಿ ಪೂರ್ಣ ಪ್ರಮಾಣದ ತಪಾಸಣೆ ನಡೆಯುತ್ತಿದೆ. ಈ ವೇಳೆ 6 ಕೆಜಿ ಬೆಳ್ಳಿ ಇಟ್ಟಿಗೆ ನಾಪತ್ತೆಯಾಗಿರುವುದು ಕಂಡುಬಂದಿದೆ. ವ್ಯರ್ಥವಾಗುವ ಬೆಳ್ಳಿಯನ್ನು ಚಿನ್ನದ ಬಾಂಡ್‌ಗಳಾಗಿ ಪರಿವರ್ತಿಸಿ ಬ್ಯಾಂಕ್‌ಗೆ ಜಮಾ ಮಾಡಲಾಗುವುದು ಇಂದು ಇದೇ ವೇಳೆ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ವಲಯದ ಮಿಂಟ್ ಸಂಸ್ಥೆಯ ಸಹಕಾರದೊಂದಿಗೆ 10 ಕೆಜಿ ಚಿನ್ನಕ್ಕೆ ಸಾಕಷ್ಟು ಬೆಳ್ಳಿಯನ್ನು ಒದಗಿಸುವ ಮೂಲಕ ಈ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ. ಆಭರಣ ಸಂಗ್ರಹಾಲಯವಲ್ಲದೆ, ದೈನಂದಿನ ಅಗತ್ಯಗಳಿಗೆ ಬಳಸುವ ಚಿನ್ನವು ದೇವಾಲಯದಲ್ಲಿದೆ. ಉಳಿದ ಚಿನ್ನ ಬ್ಯಾಂಕ್ ಲಾಕರ್ ಗಳಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ; Dangal Movie; ದಂಗಲ್ ಸಿನಿಮಾದ ಬಾಲನಟಿ ಸುಹಾನಿ ಇನ್ನಿಲ್ಲ!
ಸ್ಟ್ರಾಂಗ್ ರೂಮ್‌ನಿಂದ ಬೆಳ್ಳಿ ಕಳುವಾಗಿದ್ದೇಗೆ..?;
ಸ್ಟ್ರಾಂಗ್ ರೂಮ್‌ನಿಂದ ಬೆಳ್ಳಿ ಕಳುವಾಗಿದ್ದೇಗೆ..?; ಬೆಳ್ಳಿ ಬ್ಯಾಂಕ್‌ನಲ್ಲಿಲ್ಲ, ದೇವಸ್ಥಾನದಲ್ಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಬಹಿರಂಗಪಡಿಸಿದ್ದಾರೆ. ಸ್ಟ್ರಾಂಗ್ ರೂಂ ಸ್ಥಾಪಿಸಿ ಬ್ಯಾಂಕ್ ಲಾಕರ್ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ. 80 ಕೋಟಿಗೂ ಅಧಿಕ ಮೊತ್ತದ ಆಡಿಟ್ ಆಕ್ಷೇಪಣೆಗಳಿದ್ದರೆ, 33.5 ಕೋಟಿ ರೂ.ಗೆ ರಸೀದಿಗಳಿವೆ ಎಂದು ತಿಳಿಸಿದರು. ಕರೋನಾ ಸಮಯದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ 5 ಕೋಟಿ ರೂ.ಗಳ ಠೇವಣಿಗಳನ್ನು ನೌಕರರ ಸಂಬಳ ಮತ್ತು ದೇವಸ್ಥಾನದ ನಿರ್ವಹಣೆಗೆ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಕ್ತರ ನೂಕುನುಗ್ಗಲಿನಿಂದ ಆದಾಯ ಹೆಚ್ಚಿದೆ.ಇದರಿಂದ 2 ಕೋಟಿ ರೂ.ಮರು ಠೇವಣಿಯಾಗಿದೆ ಎಂದರು. ಉಳಿದ ಹಣವನ್ನು ಶ್ರೀರಾಮ ನವಮಿ ನಂತರ ಜಮಾ ಮಾಡಲಾಗುವುದು ಎಂದು ವಿವರಿಸಿದರು. ಚಿನ್ನ, ಬೆಳ್ಳಿ, ನಗದು ವ್ಯವಹಾರದಲ್ಲಿ ತಪ್ಪು ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ; Daali Dhananjay; ಡಾಲಿ ಧನಂಜಯ್ ಮೈಸೂರಿನಿಂದ ಲೋಕಸಭಾ ಅಖಾಡಕ್ಕೆ?
(ಬೆಳ್ಳಿ ಇಟ್ಟಿಗೆ ಚಿತ್ರಗಳನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ)