InternationalLifestyle

11 ಬೆತ್ತಲೆ ಟೂರ್‌ ಪ್ಯಾಕೇಜ್‌; ಬಟ್ಟೆ ಇಲ್ಲದೆ ಬೆತ್ತಲಾಗಿ ಬರುವವರಿಗಷ್ಟೇ ಇಲ್ಲಿ ಅವಕಾಶ!

ಪ್ರಪಂಚದಲ್ಲಿ ಇತ್ತೀಚೆಗೆ ಏನೇನೋ ವಿಚಿತ್ರ ಉತ್ಸವಗಳು, ಪಾರ್ಟಿಗಳು ನಡೆಯುತ್ತಿವೆ.. ಅಲ್ಲೆಲ್ಲೋ ವರ್ಷಕ್ಕೊಮ್ಮೆ ಬೆತ್ತಲೆ ಉತ್ಸವ ನಡೆಯುತ್ತೆ ಅಂತ ನಾವು ಕೇಳಿದ್ದೇವೆ.. ಈ ಉತ್ಸವದಲ್ಲಿ ಎಲ್ಲರೂ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಾರೆ.. ಅದೇ ರೀತಿ ಇಲ್ಲೊಂದು ಟ್ರಾವೆಲ್‌ ಕಂಪನಿ ವಿಚಿತ್ರ ಆಫರ್‌ ಒಂದು ನೀಡಿದೆ.. 11 ದಿನಗಳ ಕಾಲ ಬೋಟ್‌ ಪ್ರಯಾಣದ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಇದರಲ್ಲಿ ಪ್ರಯಾಣ ಮಾಡಬಯಸುವವರು ಕಡ್ಡಾಯವಾಗಿ ಬೆತ್ತಲೆಯಾಗಿ ಬರಬೇಕು, 11 ದಿನಗಳ ಕಾಲ ಬೆತ್ತಲೆಯಾಗಿಯೇ ಪ್ರಯಾಣ ಮಾಡಬೇಕು ಎಂದು ಕಂಡೀಷನ್‌ ಇಡಲಾಗಿದೆ.. ಇದೊಂದು ವಿಚಿತ್ರ ಟೂರ್‌ ಪ್ಯಾಕೇಜ್‌ ಆದರೂ, ಈ ಟೂರ್‌ಗೆ ಹೋಗಲು ಜನರು ಮುಗಿ ಬೀಳುತ್ತಿದ್ದಾರೆ…
ಬೇರ್‌ ನೆಸಸಿಟಿ ಅನ್ನೋ ಟ್ರಾವೆಲ್‌ ಕಂಪನಿ ಇಂತಹದ್ದೊಂದು ಬೆತ್ತಲೇ ಬೋಟ್‌ ಪ್ರಯಾಣವನ್ನು ಆಯೋಜನೆ ಮಾಡಿದೆ.. 968 ಟಡಿಯ ನಾರ್ವೆಯನ್‌ ಪರ್ಲ್‌ ಬೋಟ್‌ನಲ್ಲಿ ಈ ಪ್ರಯಾಣ ಆಯೋಜಿಸಲಾಗಿದೆ.. ಅಮೆರಿಕಾದ ಕರಾವಳಿ ಭಾಗವಾಗಿರುವ ಮಿಯಾಮಿಯಿಂದ ಕೆರಿಬಿಯನ್ ಐಸ್‌ಲ್ಯಾಂಡ್‌ಗೆ ಈ ಬೋಟು ಪ್ರವಾಸ ತೆರಳಲಿದೆ. ಈ ಪ್ರವಾಸದಲ್ಲಿ ಯಾರು ಬೇಕಾದರೂ ಭಾಗಿಯಾಗಬಹದು.. ಆದ್ರೆ ಬೆತ್ತಲೆಯಾಗಿ ಬರಬೇಕು ಅಷ್ಟೇ.. ಗುಂಪಾಗಿ, ಜೋಡಿಯಾಗಿ, ಏಕಾಂಗಿಯಾಗಿಯೂ ಬಂದು ಈ ಪ್ರವಾಸದಲ್ಲಿ ಭಾಗಿಯಾಗಬಹುದು.. 11 ದಿನವೂ ಎಲ್ಲರೂ ಬೆತ್ತಲೆಯಾಗಿದ್ದು ಸಮುದ್ರಯಾನವನ್ನು ಎಂಜಾಯ್‌ ಮಾಡಲಿದ್ದಾರೆ ಎಂದು ಟೂರ್‌ ಆಯೋಜಿಸಿರುವ ಕಂಪನಿ ತಿಳಿಸಿದೆ..
ಬೇರ್ ನೆಸಸಿಟಿ ಜೊತೆ ನಾರ್ವೆಯನ್ ಕ್ರೂಸ್ ಶಿಪ್ ಪಾಲುದಾರಿಕೆ ಮಾಡಿಕೊಂಡಿದೆ.. ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ನೈಸರ್ಗಿಕವಾಗಿಯೇ ಆಸ್ವಾದಿಸುವಂತೆ ಮಾಡುವುದಕ್ಕಾಗಿ ಈ ಬೆತ್ತಲೇ ಪ್ರವಾಸ ಹಮ್ಮಿಕೊಂಡಿದ್ದೇವೆ ಎಂದು ಟೂರ್‌ ಪ್ಲಾನರ್ಸ್‌ ಹೇಳಿದ್ದಾರೆ.. ಈ 11 ದಿನಗಳಲ್ಲಿ ಕೆಲ ಖಾಸಗಿ ದ್ವೀಪ, ಖಾಸಗಿ ಬೀಚ್ ರೆಸಾರ್ಟ್ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಲಾಗುತ್ತದೆ.. ಎಲ್ಲಿಗೇ ಹೋದರೂ ಈ ಬೋಟ್‌ ಪ್ರವಾಸಿಗರು ಬೆತ್ತಲೆಯಾಗಿಯೇ ಇರಬೇಕು..
11 ದಿನಗಳ ಪ್ರವಾಸದ ಸಂದರ್ಭದಲ್ಲಿ ಕೆಲ ಚಟುವಟಿಕೆಗಳು ನಡೆಯುತ್ತವೆ, ಕೆರಿಬಿಯನ್ ಪಾರ್ಟಿ, ಮ್ಯೂಸಿಕ್ ಮಸ್ತಿ ಕೂಡಾ ಇರುತ್ತದೆ.. ಹಲವಾರು ಮನರಂಜನೆ ಕಾರ್ಯಕ್ರಮಗಳನ್ನು ಕೂಡಾ ಆಯೋಜನೆ ಮಾಡಲಾಗಿದೆ.. ಅತ್ಯಂತ ಐಷಾರಾಮಿ ಪ್ರವಾಸದಲ್ಲಿ ಪಾಲ್ಗೊಳ್ಳುವ ನಿಮಗೆ ಅಷ್ಟೇ ಲಕ್ಷುರಿ ಆತಿಥ್ಯ ನೀಡಲಿದ್ದೇವೆ ಎಂದು ಟೂರ್‌ ಪ್ಲಾನರ್ಸ್‌ ಹೇಳಿಕೊಂಡಿದ್ದಾರೆ.. ನ್ಯೂಡ್ ಬೋಟ್ ಪ್ರಯಾಣದ ಮೂಲಕ ನಿತ್ಯ ಆತಿಥ್ಯ, ಆಹಾರ, ಐತಿಹಾಸಿಕ ಸ್ಥಳ, ಪ್ರಕೃತಿ ಸೌಂದರ್ಯ ಆಸ್ವಾದಿಸಿ ಎಂದು ಬೇರ್ ನೆಸೆಸಿಟಿ ಟ್ರಾವೆಲ್ ಕಂಪನಿ ಮನವಿ ಮಾಡಿದೆ.
ಈ ಪ್ರವಾಸಕ್ಕೆ ಸಿದ್ದಗೊಂಡಿರುವ ಬೋಟ್‌ಗೆ ದಿ ಬಿಗ್ ನ್ಯೂಡ್ ಬೋಟ್ ಜರ್ನಿ ಎಂದು ಹೆಸರಿಡಲಾಗಿದೆ. ಬುಕಿಂಗ್ ನಡೆಯುತ್ತಿದ್ದು, ಕೆಲವೇ ಮಂದಿಗೆ ಮಾತ್ರ ಅವಕಾಶ ಬಾಕಿ ಉಳಿದಿದೆ. ಈ 11 ದಿನಗಳ ಪ್ರವಾಸ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂದು ಬೇರ್ ನೆಸಸಿಟಿ ಹೇಳಿದೆ.

Share Post