International

ರಷ್ಯಾದಲ್ಲಿ ಮೆಡಿಕಲ್‌ ಎಮರ್ಜೆನ್ಸಿ ಘೋಷಣೆ- ಸರ್ಕಾರ ಆದೇಶಿಸಿದ ಪತ್ರ ವೈರಲ್

‌ರಷ್ಯಾ: ಸೋವಿಯತ್ ರಾಷ್ಟ್ರವನ್ನು ಮತ್ತೆ ಪುನರ್ನಿರ್ಮಿಸುವ ಉದ್ದೇಶದಿಂದ ಪುಟಿನ್ ರಷ್ಯಾ ಸೈನಿಕರ ಪ್ರಾಣದ ಮೇಲೆ ಕಿಂಚಿತ್ತೂ ಕಾಳಜಿಯಿಲ್ಲದವನಂತೆ ವರ್ತಿಸುತ್ತಿದ್ದಾನೆ.  ಯುದ್ಧದಲ್ಲಿ ಸುಮಾರು 50,000 ಸೈನಿಕರ ಪ್ರಾಣದ ಜೊತೆ ಆಟವಾಡಲು ಯುದ್ಧದ ರಂಗಕ್ಕೆ ಬಿಟ್ಟಿದ್ದಾನೆಂದು ಅಂತರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.  ಈಗಾಗಲೇ ಯುಕ್ರೆನ್‌ ಮೇಲಿನ ಯುದ್ಧದಲ್ಲಿ  ನೂರಾರು ರಷ್ಯಾ ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಹೀಗಿರುವಾಗ ರಷ್ಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಗೆ ಸಂಬಂಧಿಸಿದಂತೆ ರಷ್ಯಾದ ಉಪ ಆರೋಗ್ಯ ಸಚಿವರು ನೀಡಿದ ನಿರ್ದೇಶನದ ಕೆಲವು ದಾಖಲೆಗಳು ಬಯಲಾಗಿವೆ. ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಲು ರಷ್ಯಾದಲ್ಲಿ ವೈದ್ಯರು ಮತ್ತು ಅರೆವೈದ್ಯರನ್ನು ನೇಮಿಸುವ ಬಗ್ಗೆ ಪತ್ರದಲ್ಲಿ ಉಲ್ಲೇಖವಿದೆ.

“ಜನರ ಜೀವವನ್ನು ಉಳಿಸುವ ಮತ್ತು ಅವರ ಆರೋಗ್ಯವನ್ನು ಕಾಪಾಡುವ ಗುರಿಯನ್ನು ಹೊಂದಿರುವ ಕಾರದಿಂದಾಗಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು” ಎಂದು ದೇಶದ ವೈದ್ಯಕೀಯ ಸಂಸ್ಥೆಗಳನ್ನು ರಷ್ಯಾ ಕೇಳಿದೆ. ಕಾರ್ಡಿಯಾಲಜಿ, ಮ್ಯಾಕ್ಸಿಲೊಫೇಶಿಯಲ್ ಮತ್ತು ಪೀಡಿಯಾಟ್ರಿಕ್ ಸರ್ಜನ್‌ಗಳು, ಅರಿವಳಿಕೆ ತಜ್ಞರು, ರೇಡಿಯಾಲಜಿಸ್ಟ್‌ಗಳು, ದಾದಿಯರು ಮತ್ತು ಸಾಂಕ್ರಾಮಿಕ ರೋಗ ತಜ್ಞರು ಲಭ್ಯವಿರಬೇಕು ಎಂದು ರಷ್ಯಾದ ಉಪ ಆರೋಗ್ಯ ಸಚಿವರು ನಿರ್ದೇಶಿಸಿದ್ದಾರೆ.

ರಷ್ಯಾದ ಗುಪ್ತಚರ ಮೂಲಗಳು ಹೇಳುವಂತೆ ಪುಟಿನ್ ಯುದ್ಧ ಮುಗಿಯುವಷ್ಟರಲ್ಲಿ  50,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ರು, ಸಾವಿನ ಸಂಖ್ಯೆಯನ್ನು ಮಾತ್ರ ಲೆಕ್ಕ ಇಡಲ್ಲ. ಒಂದು ವೇಳೆ ಯುದ್ಧದಲ್ಲಿ ಗೆಲುವು  ಅನುಮಾಣ ಎಂಬುದು ಗೊತ್ತಾದ್ರೆ  ತನ್ನ ರಾಸಾಯನಿಕ ಬಾಂಬ್‌ಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

Share Post