InternationalLifestyle

ಹೌದು, ಹಣಕ್ಕಾಗಿ ಶ್ರೀಮಂತ ಮುದುಕನನ್ನು ಮದುವೆಯಾಗಿದ್ದೇನೆ ಎಂದ ಮಾಜಿ ಮಾಡೆಲ್‌!

ಕೆಲ ಸಂಗಾತಿಗಳ ಮಧ್ಯೆ ವಯಸ್ಸಿನ ಅಂತರ ತುಂಬಾನೇ ಜಾಸ್ತಿ ಇರೋದನ್ನು ನಾವು ಕಾಣುತ್ತಿರುತ್ತೇವೆ.. ಕೆಲವು ಯುವತಿಯರು ಸುಂದರವಾಗಿದ್ದರೂ ಅಜ್ಜಂದಿರನ್ನು ಮದುವೆಯಾಗಿರುತ್ತಾರೆ.. ವರ ಶ್ರೀಮಂತರ ಆಗಿದ್ದರೆ ವಯಸ್ಸು ಎಷ್ಟಾಗಿದ್ದರೂ ಹುಡುಗಿಯರು ಅವರ ಹಿಂದೆ ಬೀಳುತ್ತಾರೆ ಎಂಬ ಅಪವಾದ ಇದೆ.. ಆದ್ರೂ ಕೂಡಾ ಹುಡುಗಿಯರು ಹಣಕ್ಕಾಗಿ ಮದುವೆಯಾಗಿದ್ದೇನೆ ಎಂದು ಹೇಳಿಕೊಳ್ಳೋದಿಲ್ಲ.. ಆದ್ರೆ ಬ್ರಿಟನ್‌ನ 42 ವರ್ಷದ ಮಾಜಿ ಮಾಡೆಲ್‌ ಕಾರ್ಲಾ ಬೆಲ್ಲುಸಿ ಎಂಬಾಕೆ ತನಗಿಂತ 13 ವರ್ಷದ ಹಿರಿಯನನ್ನು ಮದುವೆಯಾಗಿದ್ದಾಳೆ.. ವಿಶೇಷ ಅಂದ್ರೆ, ನಾನು ಹಣಕ್ಕಾಗಿಯೇ ಆತನ ಹಿಂದೆ ಬಿದ್ದೆ.. ಮೋಸ ಮಾಡೋಣ ಎಂದು ಪ್ರೀತಿಯ ನಾಟಕವಾಡಿದ್ದೆ.. ಆದ್ರೆ ವಯಸ್ಸಿನಲ್ಲಿ ಹಿರಿಯನಾದರೂ ನಿಜವಾಗಿಯೂ ಆತನ ಪ್ರೀತಿಯಲ್ಲಿ ಬಿದ್ದು ಮದುವೆಯಾದೆ ಎಂದು ಹೇಳಿಕೊಂಡಿದ್ದಾಳೆ..

ಜಿಯೋವಾನಿ ಎಂಬುವವರನ್ನು ಕಾರ್ಲಾ ಮದುವೆಯಾಗಿದ್ದಾಳೆ.. ಆದ್ರೆ  ಮೊದಲು ಜಿಯೋವಾನಿ ಆಸ್ತಿ ನೋಡಿ ಹಣಕ್ಕಾಗಿ ಆತನ ಜೊತೆ ಪ್ರೀತಿಯ ನಾಟಕವಾಡಿದ್ದಳು.. ಹಣ ಪಡೆದು ಮೋಸ ಮಾಡೋಣ ಅನ್ನೋದು ಆಕೆ ಉದ್ದೇಶವಾಗಿತ್ತು.. ಆದ್ರೆ ಆತನ ಜೊತೆ ಕಾಲ ಕಳೆದ ಮೇಲೆ ಈಕೆಯೇ ಆತನ ಪ್ರೇಮದ ಬಲೆಗೆ ಬಿದ್ದಿದ್ದಾಳೆ.. ಆತನೊಂದಿಗೆ ವಿವಾಹವೂ ಆಗಿದ್ದಾಳೆ.. ಯಾರು ಎಷ್ಟೇ ಕಾಲೆಳೆದರೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಆಕೆ ಹೇಳಿಕೊಂಡಿದ್ದಾಳೆ..

ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಾಡೆಲ್‌ ಕಾರ್ಲಾ ಬೆಲ್ಲುಸಿ, ಅದರ ಬಿಲ್‌ ನೋಡಿ ಹೌಹಾರಿದ್ದಳು.. ಶಸ್ತ್ರ ಚಿಕಿತ್ಸೆಗೆ  7 ಲಕ್ಷ 41 ಸಾವಿರ ರೂಪಾಯಿ ಆಗಿತ್ತು… ಇದರಿಂದ ತಪ್ಪಿಸಿಕೊಳ್ಳಲು, ಕಾರ್ಲಾ ಶಸ್ತ್ರಚಿಕಿತ್ಸೆ ಮಾಡಿದ್ದ ಸರ್ಜನ್ ನನ್ನೇ ಫ್ಲರ್ಟ್ ಮಾಡಲು ಶುರು ಮಾಡಿದ್ದಳು. ಕಳೆದ ವರ್ಷ ಕಾರ್ಲಾ ಬೆಲ್ಲುಸಿ ಪ್ರೇಮಿಗಳ ದಿನದಂದು ಬಟ್ಟೆ ಹಾಕಿಕೊಳ್ಳದೆ ಇಡೀ ದಿನ ಮನೆಯಲ್ಲಿರ್ತೇನೆ, ಪತಿಗೆ ವಿಶೇಷ ಅಡುಗೆ ಮಾಡ್ತೇನೆ ಎಂದೂ ಪೋಸ್ಟ್ ಹಾಕಿದ್ದಳು.

ನಾನು ಮೊದಲು ಜಿಯೋವಾನಿಯನ್ನು ಹಣ ನೋಡಿ ಪ್ರೀತಿಸಿದ್ದೆ. ತಮಾಷೆಯಾಗಿಯೇ ಇಬ್ಬರ ಮದುವೆ ನಡೆದಿತ್ತು. ಮದುವೆ ನಂತ್ರ ನಿಜವಾಗ್ಲೂ ಜಿಯೊ ಪ್ರೀತಿಗೆ ಬಿದ್ದಿದ್ದೆನೆ ಎಂದು ಕಾರ್ಲಾ ಹೇಳಿಕೊಂಡಿದ್ದಾಳೆ..

 

Share Post