International

ರಸ್ತೆ ರಸ್ತೆಗಳಲ್ಲಿ ಅಲೆದು ಜನರಲ್ಲಿ ದೇಶಭಕ್ತಿ ಸ್ಪೂರ್ತಿ ತುಂಬುತ್ತಿರುವ ಜೆಲೆನ್‌ ಸ್ಕಿ

ಉಕ್ರೇನ್:‌  ರಷ್ಯಾ ಉಕ್ರೇನ್‌ ಮೇಲೆ ಸಮರ ಸಾರಿ ಇಂದಿಗೆ ಮೂರು ದಿನಗಳಾಗಿವೆ. ಈಗಾಗಲೇ ನೂರಾರು ಮಂದಿ ಸೈನಿಕರು, ನಾಗರೀಕರು ಪ್ರಾಣ ತೆತ್ತಿದ್ದಾರೆ. ಅನೇಕ ನಗರಗಳು ಅವಶೇಷಗಳಾಗಿವೆ. ಜನ ಪ್ರಾಣಭಯದಿಂದ ಬಂಕರ್‌ನಲ್ಲಿ ಅಡಗಿ ಕುಳಿತಿದ್ದಾರೆ. ಸಹಾಯ ಮಾಡ್ತೇವೆಂದು ಹೇಳಿ ಕೈಕಟ್ಟಿ ಕುಳಿತ ಜಗತ್ತಿನ ಅತಿದೊಡ್ಡ ರಾಷ್ಟ್ರಗಳೊಂದಿಗೆ ಉಕ್ರೇನ್‌ ಒಂಟಿಯಾಗಿದೆ. ತನ್ನ ತಾಯ್ನಾಡನ್ನು ರಕ್ಷಿಸಲು ಸೇನೆ ಪರಿತಪಿಸುತ್ತಿದೆ. ಯಾವುದೇ ಕಾರಣಕ್ಕೂ ನಾವು ರಷ್ಯಾಗೆ ಶರಣಾಗಲ್ಲ ಎಂದು ಉಕ್ರೇನ್‌ ಅಧ್ಯಕ್ಷ ಖಡಕ್‌ ಸಂದೇಶ ರವಾನಿಸಿದ್ದಾರೆ. ಬನ್ನಿ ನಮ್ಮ ನೆಲವನ್ನು ನಾವೇ ರಕ್ಷಣೆ ಮಾಡೋಣ ಎಂದು ಪ್ರಜೆಗಳಿಗೆ ಕರೆ ನೀಡಿದ್ದಾರೆ ಜೆಲೆನ್‌ ಸ್ಕಿ.

ಉಕ್ರೇನ್‌ ರಸ್ತೆಗಳಲ್ಲಿ ಓಡಾಡಿ ಜನರಲ್ಲಿ ದೇಶಭಕ್ತಿಯನ್ನು ಹುರಿದುಂಬಿಸುತ್ತಿದ್ದಾರೆ. ಜನರ ಕೈಗೆ ಆಯುಧಗಳನ್ನು ಕೊಟ್ಟು ಮಣ್ಣಿನ ರಕ್ಷಣೆ ಮಾಡಲು ಸ್ಪೂರ್ತಿ ತುಂಬಿದ್ದಾರೆ. ದೇಶವನ್ನು ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಒಬ್ಬ ನಾಯಕನಾಗಿ ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ಜೆಲೆನ್ಸ್‌ ಸ್ಕಿ ತೋರಿಸಿಕೊಟ್ಟಿದ್ದಾರೆ.

ಎಲ್ಲೋ ದೊಡ್ಡ ಭವನದಲ್ಲಿ ಕೂತು ಆದೇಶಗಳನ್ನು ಮಾಡ್ತಿಲ್ಲ, ಸೈನಿಕರ, ಜನರ ಮಧ್ಯೆ ಓಡಾಡುತ್ತಾ ಧೈರ್ಯ ತುಂಬುತ್ತಿದ್ದಾರೆ. ದೈತ್ಯ ರಾಷ್ಟ್ರದೊಂದಿಗೆ ಒಂದು ಪುಟ್ಟ ದೇಶ ಕಾದಾಡುವುದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ಗೊತ್ತಿದೆ. ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಶತ್ರುಗಳ ಮೇಲೆ ಮುಗಿ ಬೀಳುತ್ತಿದ್ದಾರೆ..

ಮತ್ತೊಂದೆಡೆ ಜಗತ್ತಿನ ವಿವಿಧ ದೇಶಗಳೊಂದಿಗೆ ಮಾತನಾಡಿ ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಒತ್ತಡ ಹಾಕಲು ಜೆಲೆನ್ಸ್‌ ಸ್ಕಿ ಪ್ರಯತ್ನಿಸುತ್ತಿದ್ದಾರೆ. ಒಂದೆಡೆ ಜೆಲೆನ್‌ ಸ್ಕಿ ಸಿಕ್ಕಿದ್ರೆ ಸಾಕು ಬಂಧಿಸಲು ರಷ್ಯಾ ಸೇನೆ ಕಾತುರದಿಂದ ಕಾದಿದೆ. ಅವಶ್ಯಕತೆ ಇದ್ರೆ ಸಾಯಿಸಲು ಕೂಡ ರಷ್ಯಾ ಹಿಂದೆ ಮುಂದೆ ನೋಡಲ್ಲ. ಆತನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ತನಗೆ ಬೇಕಾದವರನ್ನು ಅಲ್ಲಿ ಕೂರಿಸಲು ರಷ್ಯಾ ಪ್ಲಾನ್‌ ಮಾಡ್ತದೆ. ಅದಕ್ಕೆ ಉಕ್ರೇನ್‌ ಅಧ್ಯಕ್ಷ ತಲೆಮರೆಸಿಕೊಂಡಿದ್ದಾನೆ ಎಂಬ ಹೇಳಿಕೆಗೆ, ನಾನು ಎಲ್ಲೂ ಹೋಗಿಲ್ಲ ಇಲ್ಲೇ ಇದ್ದೇನೆ ಎಂಬ ಸಂದೇಶವನ್ನು ಕೂಡ ಜೆಲೆನ್‌ ಸ್ಕಿ ಕಳಿಸಿದ್ದಾರೆ.

Share Post