International

OPERATION GANGA: ಆಪರೇಷನ್‌ ಗಂಗಾ ಕಾರ್ಯಾಚರಣೆ ಚುರುಕು; ಪೋಲೆಂಡ್‌ನಿಂದ ಹೊರಟ 2 ವಿಮಾನ

ಪೋಲೆಂಡ್‌:  ಪೋಲೆಂಡ್‌ನಿಂದ ಇಂದು ಎರಡು ವಿಮಾನಗಳು ದೆಹಲಿಯತ್ತ ಹೊರಟಿವೆ. ಒಂದು ವಿಮಾನದಲ್ಲಿ 218 ಹಾಗೂ ಮತ್ತೊಂದು ವಿಮಾನದಲ್ಲಿ 219 ವಿದ್ಯಾರ್ಥಿಗಳು ಸೇಫಾಗಿ ಪ್ರಯಾಣ ಬೆಳೆಸಿದ್ದಾರೆ. ಉಕ್ರೇನ್‌ನ ವಿವಿಧ ನಗರಗಳಿಂದ ಪೋಲೆಂಡ್‌ ಪ್ರವೇಶಿಸಿದ್ದ ವಿದ್ಯಾರ್ಥಿಗಳನ್ನು ಸೇಫಾಗಿ ಭಾರತಕ್ಕೆ ಕರೆತರಲಾಗುತ್ತಿದೆ.

ಇನ್ನು ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ಸೇಫಾಗಿ ಭಾರತಕ್ಕೆ ಕರೆತರಲು ಕೆಲ ಸಚಿವರು ಪೋಲೆಂಡ್‌, ರೊಮಾನಿಯಾಗೆ ಹೋಗಿದ್ದಾರೆ. ಪೋಲೆಂಡ್‌ನಲ್ಲಿ ಜನರಲ್‌ ವಿಕೆ ಸಿಂಗ್‌ ಇದ್ದು, ವಿದ್ಯಾರ್ಥಿಗಳನ್ನು ಸೇಫಾಗಿ ಭಾರತಕ್ಕೆ ಕಳುಹಿಸಿಕೊಡುತ್ತಿದ್ದಾರೆ. ತಾವೇ ಮುತುವರ್ಜಿ ವಹಿಸಿ, ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಕೂರಿಸಿ ಅವರನ್ನು ದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ.

 

Share Post