ನಲ್ಗೊಂಡ ಬಳಿ ತರಬೇತಿ ನಿರತ ವಿಮಾನ ಪತನ; ಇಬ್ಬರು ದುರ್ಮರಣ
ನಲ್ಗೊಂಡ: ತೆಲಂಗಾಣದ ನಲ್ಗೊಂಡ ಬಳಿ ತರಬೇತಿ ನಿರತ ಮಿನಿ ವಿಮಾನ ಪತನಗೊಂಡಿದ್ದು, ಪೈಲಟ್ ಹಾಗೂ ಟ್ರೈನಿ ಪೈಲಟ್ ಸಾವನ್ನಪ್ಪಿದ್ದಾರೆ. ಇಲ್ಲಿನ ಪೆದ್ದವೂರ ಮಂಡಲದ ರಾಮಣ್ಣಗುಡೆಂ ತಾಂಡಾದ ಬಳಿ ಈ ದುರಂತ ಸಂಭವಿಸಿದೆ.
ತರಬೇತಿ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವಿಮಾನ ಪತನವಾಗಿದೆ. ಹೊಲದಲ್ಲಿ ಕೆಲಸ ಮಾಡುತ್ತಿರುವವರು ನೋಡಿ ನೆರವಿಗೆ ಧಾವಿಸಿದ್ದಾರೆ. ಆದ್ರೆ ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಇಬ್ಬರ ದೇಹಗಳೂ ಛಿದ್ರವಾಗಿವೆ.
ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಪ್ರಕಾರ, ಸಿಡಿಲು ಬಡಿದಂತೆ ಭಾರಿ ಶಬ್ದ ಕೇಳಿತು. ಸ್ವಲ್ಪ ಹೊತ್ತಿನಲ್ಲೇ ದಟ್ಟ ಹೊಗೆ ಹಾಗೂ ಬೆಂಕಿ ಕಾಣಿಸಿಕೊಳ್ತು. ಸ್ಥಳಕ್ಕೆ ಹೋಗಿ ನೋಡಿದಾಗಿ, ವಿಮಾನ ಪತನವಾಗಿರುವುದು ಗೊತ್ತಾಯಿತು ಎಂದು ಹೇಳಿದ್ದಾರೆ.