ಉಕ್ರೇನ್‌ಗೆ ಫ್ರಾನ್ಸ್ ಸಹಾಯ ಹಸ್ತ-ಶಸ್ತ್ರಾಸ್ತ್ರ ನೆರವು ನೀಡಲು ತೀರ್ಮಾನ
ಫ್ರಾನ್ಸ್: ರಷ್ಯಾ ಸೇನಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಕಡೆಗೆ ಮುನ್ನುಗ್ಗುತ್ತಿವೆ. ಯಾವುದೇ ಕ್ಷಣದಲ್ಲಾದ್ರೂ ರಾಜಧಾನಿ ಕೀವ್ ಅನ್ನು ರಷ್ಯಾ ವಶಪಡಿಸಿಕೊಳ್ಳಬಹುದು. ಕೀವ್ ವಾಯುಪ್ರದೇಶದಲ್ಲಿ ವೈಮಾನಿಕ ದಾಳಿಯ ಸೈರನ್‌ಗಳು ಮೊಳಗುತ್ತಿದೆ. ಬಾಂಬ್‌ಗಳು ಮತ್ತು ಫಿರಂಗಿ ಶೆಲ್‌ಗಳಿಂದ ಕೀವ್ ನಗರ ಅಲ್ಲೋಲ ಕಲ್ಲೋಲವಾಗಿದೆ.
ಜನರು ಪ್ರಾಣ ಉಳಿಸಿಕೊಳ್ಳಲು ಬಂಕರ್‌ಗಳಲ್ಲಿ ಅಡಗಿಕೊಂಡಿದ್ದಾರೆ. ತಾನು ಎಲ್ಲಿಯೂ ಓಡಿಹೋಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಡೊಲಿಮಿರ್ ಜೆಲಿನ್ಸ್ಕಿ ತಿಳಿಸಿದ್ದಾರೆ. ತನ್ನನ್ನು ಸ್ಥಳಾಂತರ ಮಾಡೋದಲ್ಲ ಶಸ್ತ್ರಾಸ್ತ್ರ ಮತ್ತು ಬೆಂಬಲವನ್ನು ನೀಡುವಂತೆ ಅಮೆರಿಕದ ಮೇಲೆ ಜೆಲೆನ್ ಸ್ಕಿ ಒತ್ತಡ ಹಾಕಿದ್ರು. ಈ ನಡುವೆ ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಲು ಫ್ರಾನ್ಸ್ ಮುಂದೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಫ್ರಾನ್ಸ್ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ನೀಡಲು ಒಪ್ಪಿದೆ ಎನ್ನಲಾಗಿದೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ನೆರವು ನೀಡಲು ಸಿದ್ಧವಾಗಿವೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಹೇಳಿದ್ದಾರೆ. ಆಯುಧಗಳು ಫ್ರಾನ್ಸ್‌ನಿಂದ ಬರಲಿವೆ ಎಂದು ತಿಳಿಸಿದ್ದಾರೆ.