International

ಕಂದಹಾರ್‌ ವಿಮಾನ ಅಪಹರಣ ಪ್ರಕರಣ; ಪಾಕಿಸ್ತಾನದಲ್ಲಿ ಅಪಹರಣಕಾರ ಹತ್ಯೆ

ನವದೆಹಲಿ: 1999ರಲ್ಲಿ ದೆಹಲಿಯಿಂದ ಅಫ್ಗಾನಿಸ್ತಾನದ ಕಂದಹಾರ್‌ಗೆ ಏರ್‌ ಇಂಡಿಯಾ ವಿಮಾನ ಅಪಹರಿಸಿದ್ದ ಉಗ್ರರಲ್ಲಿ ಒಬ್ಬನಾದ ಮಿಸ್ತ್ರಿ ಅಲಿಯಾಸ್‌ ಝಾಹಿದ್‌ ಅಖುಂದ್‌ ಪಾಕಿಸ್ತಾನದಲ್ಲಿ ಹತನಾಗಿದ್ದಾನೆ ಎಂದು ತಿಳಿದುಬಂದಿದೆ. ಇಬ್ಬರು ದಾಳಿಕೋರರು ಅವನ ಮನೆಯಲ್ಲಿ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ವರದಿಯಾಗಿದೆ.

1999ರಲ್ಲಿ ಏರ್‌ ಇಂಡಿಯಾದ ಐಸಿ–814 ವಿಮಾನವನ್ನು ಹೈಜಾಕ್‌ ಮಾಡಲಾಗಿತ್ತು. ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ಮುಖಸ್ಥ ಮೌಲಾನಾ ಮಸೂದ್‌ ಅಜರ್‌, ಉಗ್ರರ ಸಂಘಟನೆಗಳ ಅಲ್ ಉಮರ್‌ ಮುಜಾಹಿದೀನ್‌, ಮುಷ್ತಕ್‌ ಅಹಮದ್‌ ಝರ್ಗರ್‌, ಬ್ರಿಟನ್‌ ಮೂಲದ ಅಲ್‌–ಖೈದಾ ಅಹಮದ್‌ ಓಮರ್‌ ಸಯೀದ್‌ ಶೇಖ್‌ ಅವರನ್ನು ಭಾರತದ ಜೈಲುಗಳಿಂದ ಬಿಡಿಸಿಕೊಳ್ಳಲು ಉಗ್ರರು ವಿಮಾನ ಹೈಜಾಕ್‌ ಮಾಡಿದ್ದರು. ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು ಏಳು ದಿನಗಳವರೆಗೂ ಒತ್ತೆಯಾಗಿಟ್ಟುಕೊಂಡಿದ್ದರು. ನೇಪಾಳದ ಕಾಠ್ಮಂಡುವಿನಿಂದ ಹಾರಾಟ ಆರಂಭಿಸಿದ್ದ ವಿಮಾನವು ದೆಹಲಿ ತಲುಪಬೇಕಿತ್ತು. ಆದರೆ, ಉಗ್ರರು ವಿಮಾನವನ್ನು ಆಫ್ಗಾನಿಸ್ತಾನದ ಕಂದಹಾರ್‌ಗೆ ತೆಗೆದುಕೊಂಡು ಹೋಗಿದ್ದರು.

Share Post