International

ಮುಂದುವರೆದ ರಷ್ಯಾ ದಾಳಿ; ಇದುವರೆಗೆ 202 ಶಾಲೆ, 1500 ವಸತಿ ಕಟ್ಟಡಗಳ ಧ್ವಂಸ

ಕೀವ್: ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸುತ್ತಲೇ ಇದೆ. ಬರೀ ಸೇನೆ ಹಾಗೂ ಸೇನಾ ನೆಲೆಗಳ ಮೇಲೆ ಮಾತ್ರ ಅಟ್ಯಾಕ್‌ ಮಾಡುತ್ತೇವೆ. ಸಾರ್ವಜನಿಕರು ನಮ್ಮ ಗುರಿಯಲ್ಲ ಎಂದು ಹೇಳಿದ್ದ ರಷ್ಯಾ, ಜನವಸತಿ ಕಟ್ಟಡಗಳು, ಸಾರ್ವಜನಿಕರ ಪ್ರದೇಶಗಳ ಮೇಲೂ ದಾಳಿ ನಡೆಸುತ್ತಲೇ ಇದೆ. ಇದುವರೆಗೂ ರಷ್ಯಾ ಉಕ್ರೇನ್‌ನ 202 ಶಾಲೆಗಳನ್ನು ಧ್ವಂಸ ಮಾಡಿದೆ. ಜೊತೆಗೆ 1500ಕ್ಕೂ ಹೆಚ್ಚು ಜನವಸತಿ ಕಟ್ಟಡಗಳು, 34 ಆಸ್ಪತ್ರೆಗಳನ್ನು ರಷ್ಯಾ ಉಡಾಯಿಸಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಪ್ರಮುಖ ನಗರಗಳಲ್ಲಿ ನೀರು, ವಿದ್ಯುತ್‌ ಇಲ್ಲದೆ ಜನ ಪರದಾಡುತ್ತಿದ್ದಾರೆ.

Share Post