International

ಪೆನ್ ಡ್ರೈವ್ ಪ್ರಕರಣ; ಮಂಗಳವಾರ ಬರ್ತಾರಂತೆ ಪ್ರಜ್ವಲ್ ರೇವಣ್ಣ

ಬೆಂಗಳೂರು; ಹಾಸನ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಇಂದು ಬೆಂಗಳೂರಿಗೆ ಬರುತ್ತಾರೆ ಎಂದು ಹೇಳಲಾಗಿತ್ತು.. ಆದ್ರೆ, ಕೊನೆ ಕ್ಷಣದಲ್ಲಿ ಪ್ರಜ್ವಲ್ ವಿಮಾನ‌ ಹತ್ತಿಲ್ಲ.. ಮಾಹಿತಿಗಳ ಪ್ರಕಾರ ಪ್ರಜ್ವಲ್ ಮಂಗಳವಾರ ಬೆಂಗಳೂರಿಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.

  ಪ್ರಜ್ವಲ್ ರೇವಣ್ಣ ಅವರು ಜರ್ಮನ್ ಕಾಲಮಾನದ ಪ್ರಕಾರ ಇಂದು (ಮೇ 15) 12.20ರ ವಿಮಾನದ ಟಿಕೆಟ್​ ಬುಕ್ ಮಾಡಿದ್ದರು. ಆದ್ರೆ, ಕೊನೆ ಕ್ಷಣದಲ್ಲಿ ಪ್ರಜ್ವಲ್ ಅವರು ಬೆಂಗಳೂರು ಪ್ರಯಾಣವನ್ನು ರದ್ದು ಮಾಡಿದ್ದಾರೆ. ಪ್ಯಾಸೆಂಜರ್ ಲಿಸ್ಟ್​ನಲ್ಲಿ ಪ್ರಜ್ವಲ್​ ರೇವಣ್ಣ ಅವರ ಹೆಸರು ಸಹ ಇಲ್ಲ ಎಂದು ತಿಳಿದುಬಂದಿದೆ.

  ಪ್ರಜ್ವಲ್ ಮಂಗಳವಾರಕ್ಕೆ ವಿಮಾನ‌ ಟಿಕೆಟ್ ಬುಕ್ ಮಾಡಿದ್ದು, ಅಂದು ತಡರಾತ್ರಿ‌ ಬೆಂಗಳೂರಿಗೆ ವಿಮಾನ ಬರಲಿದೆ ಎಂದು ತಿಳಿದುಬಂದಿದೆ.

Share Post