InternationalNationalTechTechnology

ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಹೈದರಾಬಾದ್‌ನಲ್ಲಿ ಲ್ಯಾಂಡಿಂಗ್‌

ಹೈದರಾಬಾದ್;‌ ಇತ್ತೀಚೆಗೆ ವಿಶ್ವದ ಅತಿದೊಡ್ಡ ವಿಮಾನ ಬೆಂಗಳೂರಿಗೆ ಆಗಮಿಸಿತ್ತು. ಇದೀಗ ಹೈದರಾಬಾದ್‌ಗೆ ವಿಶ್ವದ ಅತಿದೊಡ್ಡ ಕಾರ್ಗೋ ವಿಮಾನ ಬಂದಿಳಿದಿದೆ. ಹೀಗಾಗಿ ನಿನ್ನೆ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಹೊಸ ಕಳೆ ಬಂದಿತ್ತು. ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನಗಳಲ್ಲಿ ಒಂದಾದ ಏರ್‌ಬಸ್ ಬೆಲುಗಾ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಬಂದಿಳಿಯಿತು.

ತಿಮಿಂಗಿಲ ಆಕಾರದ ಬೆಲುಗಾ ಡಿಸೆಂಬರ್ 4 ರಂದು ಹೈದರಾಬಾದ್ ವಿಮಾನ ನಿಲ್ದಾಣವನ್ನು ತಲುಪಿದ್ದು, ಇಂದು ಸಂಜೆ ವಾಪಸ್‌ ತೆರಳಲಿದೆ. GMR ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಮಾನದ ಅದರ ಲ್ಯಾಂಡಿಂಗ್, ಪಾರ್ಕಿಂಗ್ ಮತ್ತು ಟೇಕ್-ಆಫ್‌ಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಏರ್‌ಬಸ್ ಬೆಲುಗಾ ಗಾತ್ರದ ಏರ್ ಕಾರ್ಗೋವನ್ನು ಸಾಗಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ವಿಶ್ವದ ಅತಿದೊಡ್ಡ ಸರಕು ವಿಮಾನ ಆಂಟೊನೊವ್ ಆನ್ -225 ಮೇ 2016 ರಲ್ಲಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಮೊದಲ ಲ್ಯಾಂಡಿಂಗ್ ಮಾಡಿತ್ತು. ಮೂಲಸೌಕರ್ಯ ಸಾಮರ್ಥ್ಯ ಮತ್ತು ತಾಂತ್ರಿಕ ನಿಯತಾಂಕಗಳನ್ನು ಆಧರಿಸಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಈ ಕಾರ್ಗೋ ವಿಮಾನ ಲ್ಯಾಂಡ್‌ ಮಾಡಲು ನಿರ್ಧರಿಸಲಾಗಿತ್ತು.

Share Post