5 ಮತ್ತು 6 ವರ್ಷದ ಬಾಲಕಿಯರ ಮೇಲೆ ಅತ್ಯಾಚಾರ; ಮದುವೆ ಮನೆಯಲ್ಲೇ ನಡೀತು ಅನಾಚಾರ
ಲಕ್ನೋ; ಕಾಮಾಂಧನೊಬ್ಬ ಪುಟ್ಟ ಬಾಲಕಿಯರಿಬ್ಬರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ಬಳಿಯ ಬಿಜ್ನೋರ್ ಎಂಬ ಗ್ರಾಮದಲ್ಲಿ ನಡೆದಿದೆ. ಮದುವೆ ಸಮಾರಂಭವೊಂದರಲ್ಲಿ ಪೋಷಕರಜೊತೆ ಪಾಲ್ಗೊಂಡಿದ್ದ ಪುಟಾಣಿಗಳನ್ನು ಹತ್ತಿರದ ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಲಾಗಿದೆ.
ಶನಿವಾರ ರಾತ್ರಿ ಬರಾತ್ ನಡೆಯುತ್ತಿತ್ತು. ಇದರಲ್ಲಿ ಈ ಇಬ್ಬರು ಬಾಲಕಿಯರೂ ಪಾಲ್ಗೊಂಡಿದ್ದರು. ಮದುವೆಯ ಪಾರ್ಟಿಯಲ್ಲಿ ಡಿಜೆ ನುಡಿಸುವುದನ್ನು ನೋಡುತ್ತಾ ಮಕ್ಕಳು ಆನಂದಿಸುತ್ತಿದ್ದರು. ಹೀಗಾಗಿ ಪೋಷಕರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರು. ಹೀಗಿರುವಾಗಲೇ ಮಕ್ಕಳಿಬ್ಬರೂ ನಾಪತ್ತೆಯಾಗಿದ್ದರು. ಎಷ್ಟು ಹುಡುಕಿದರೂ ಸಿಗಲಿಲ್ಲ. ಸ್ಥಳೀಯರೆಲ್ಲಾ ಸೇರಿ ಸುತ್ತಮುತ್ತ ಹುಡುಕಾಡಿದಾಗ ಹತ್ತಿರದಲ್ಲೇ ಇದ್ದ ಸಣ್ಣ ಕಾಡಿನಲ್ಲಿ ಇಬ್ಬರೂ ಬಾಲಕಿಯರು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳ ಸಂಬಂಧಿಕನೇ ಇಬ್ಬರೂ ಮಕ್ಕಳನ್ನು ಅಪಹರಿಸಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.