CrimeDistricts

ಮಡಿಕೇರಿ ಹೋಮ್‌ ಸ್ಟೇಗೆ ಮಹಿಳೆಯರ ಜೊತೆ ಬಂದಿದ್ದ ಉಗ್ರ ಶಾರೀಖ್‌

ಮಡಿಕೇರಿ; ಮಂಗಳೂರು ಬಾಂಬ್‌ ಸ್ಫೋಟದ ಆರೋಪಿ ಉಗ್ರ ಶಾರೀಖ್‌ ಕೆಲದಿನ ಮಡಿಕೇರಿಯ ಹೋಮ್‌ ಸ್ಟೇ ಒಂದಕ್ಕೆ ಬಂದುಹೋಗಿದ್ದ ಅನ್ನೋ ಮಾಹಿತಿ ಹೊರಬಿದ್ದಿದೆ. ಬಾಂಬ್‌ ಬ್ಲಾಸ್ಟ್‌ ಮಾಡುವುದಕ್ಕೂ ಮೊದಲ ಉಗ್ರ ಶಾರೀಖ್‌, ಇಬ್ಬರು ಮಹಿಳೆಯರ ಜೊತೆ ಆತ ಮಡಿಕೇರಿ ಜಿಲ್ಲೆ ಹೋಮ್‌ ಸ್ಟೇ ಒಂದಕ್ಕೆ ಬಂದಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಆರೋಪಿ ಶಾರೀಖ್‌ ಹಾಗೂ ಆತನ ಸಹಚರರು ಕೊಡಗು ಜಿಲ್ಲೆಗೂ ಭೇಟಿ ನೀಡಿದ್ದರಾ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಹಾಗೂ ಮಂಗಳೂರು ಪೊಲೀಸರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಬಳಿಯ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ ಪರಿಶೀಲನೆ ಮಾಡಿದ್ದಾರೆ. ಹೋಮ್‌ ಸ್ಟೇ ಮಾಲೀಕರಿಂದ ಒಂದಷ್ಟು ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹೋಂಸ್ಟೇಗೆ ಶಾರೀಖ್ ಜೊತೆ ಅತನ ಸಹಚರರು ಹಾಗೂ ಇಬ್ಬರು ಮಹಿಳೆಯರು ಬಂದು ಹೋಗಿದ್ದಾರೆ ಎನ್ನಲಾಗಿದೆ.

Share Post