International

ಬಲವಂತವಾಗಿ ಮಕ್ಕಳನ್ನು ಯುದ್ಧಕ್ಕೆ ಕಳುಹಿಸಬೇಡಿ; ರಷ್ಯಾ ಮಹಿಳೆಯರಿಗೆ ಉಕ್ರೇನ್‌ ಅಧ್ಯಕ್ಷನ ಮನವಿ

ಕೀವ್: ಬಲವಂತವಾಗಿ ಉಕ್ರೇನ್‌ ಮೇಲೆ ಯುದ್ಧಕ್ಕೆ ಬರದಂತೆ ನಿಮ್ಮ ಮಕ್ಕಳನ್ನು ತಡೆಯಿರಿ ಎಂದು ರಷ್ಯಾ ತಾಯಂದಿರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣವೊಂದರಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ನಿಮ್ಮ ಮಕ್ಕಳನ್ನು ವಿದೇಶದಲ್ಲಿ ಯುದ್ಧಕ್ಕೆ ಕಳುಹಿಸಬೇಡಿ. ನಿಮ್ಮ ಮಗ ಎಲ್ಲಿದ್ದಾನೆ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಮಗನನ್ನು ಉಕ್ರೇನ್ ವಿರುದ್ಧ ಯುದ್ಧಕ್ಕೆ ಕಳುಹಿಸಬಹುದೆಂಬ ಸಣ್ಣದೊಂದು ಅನುಮಾನವಿದ್ದರೂ ಸಹ ಅವನನ್ನು ಕೊಲ್ಲುವುದು ಅಥವಾ ಸೆರೆಹಿಡಿಯುವುದನ್ನು ತಡೆಯಲು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಂದು ಮನವಿ ಮಾಡಿದ್ದಾರೆ.

ಉಕ್ರೇನ್‌ ಸರ್ಕಾರ ಎಂದೂ ಭಯಾನಕ ಹಾಗೂ ನರಕಸದೃಶವಾದ ಯುದ್ಧವನ್ನು ಬಯಸುವುದಿಲ್ಲ. ಸಾಧ್ಯವಾದಷ್ಟು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ರಷ್ಯಾ ಮೊದಲ ಬಾರಿಗೆ ಉಕ್ರೇನ್‌ನಲ್ಲಿ ಬಲವಂತವಾಗಿ ಯುವಕರನ್ನು ಯುದ್ಧಕ್ಕೆ ನಿಯೋಜಿಸಿದ್ದು, ಅದರಲ್ಲಿ ಅನೇಕರನ್ನು ಉಕ್ರೇನ್ ಸೇನೆ ಸೆರೆಹಿಡಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Share Post