HealthInternational

ದ.ಆಫ್ರಿಕಾದಲ್ಲಿ ಕೊರೋನಾ ಹೊಸ ರೂಪಾಂತರಿ; WHO ತುರ್ತು ಸಭೆ..!

ನೂಯಾರ್ಕ್: ದಕ್ಷಿಣ ಆಫ್ರಿಕಾದಲ್ಲಿ ಮಾರಕ ಹೊರ ಕೊರೋನಾ ರೂಪಾತರಿ ತಳಿ ಪತ್ತೆಯಾಗಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಮತ್ತೆ ಕೊರೋನಾ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಚರ್ಚೆ ಮಾಡುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ರೋಗಾಣು ವಿಕಸನ ವಿಭಾಗದ ತಾಂತ್ರಿಕ ಸಲಹಾ ಸಮಿತಿಯ ಇಂದು ತುರ್ತು ಸಭೆ ಕರೆದಿದೆ.


B.1.1.529 ಎಂದು ಕರೆಯಲ್ಪಡುವ ಈ ರೂಪಾಂತರಿ ಕೊರೋನಾ ತಳಿಯ ಬಗ್ಗೆ ಈಗ ಪ್ರಪಂಚದಾದ್ಯಂತ ಹೆಚ್ಚು ಚರ್ಚೆ ನಡೆಯುತ್ತಿದೆ. ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್‌ನಲ್ಲಿ ಹೊಸ ರೂಪಾಂತರದ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಪಂಚದ ಇತರ ದೇಶಗಳಿಗೂ ಆತಂಕ ಕಾಡುತ್ತಿದೆ. ಕೊರೋನಾ ಮೂರನೇ ಅಲೆ ವಕ್ಕರಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ತುರ್ತು ಸಭೆ ಕರೆದಿದ್ದಾರೆ.

Share Post