International

ಭಾರತೀಯರ ರಕ್ಷಣೆಗಾಗಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟ ಮೋದಿ-ಇಂದು ಝೆಲೆನ್ ಸ್ಕಿ ಜೊತೆ ಮಾತುಕತೆ

ಉಕ್ರೇನ್:‌ ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಅಪೂರ್ಣ ವಿಚಾರಕ್ಕೆ ಸಂಬಂಧಪಟ್ಟಂತೆ ನೇರವಾಗಿ ಪ್ರಧಾನಿ ಮೋದಿ ಫೀಲ್ಡಿಗಿಳಿಯಲಿದ್ದಾರೆ. ಇಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಲಿದ್ದಾರೆ. ಸುಮಿ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಚರ್ಚಿಸಲಾಗುವುದು ಎಂದು ದೆಹಲಿ ಮೂಲಗಳು ತಿಳಿಸಿವೆ.

ಈಗಾಗಲೇ ಕೇಂದ್ರವು ಉಕ್ರೇನ್‌ನಿಂದ ಸಾವಿರಾರು ಭಾರತೀಯರನ್ನು ಸ್ಥಳಾಂತರಿಸಿದೆ. ಆಪರೇಷನ್ ಗಂಗಾ ಹೆಸರಲ್ಲಿಹತ್ತಾರು ವಿಮಾನಗಳನ್ನು ಕಳುಹಿಸಿ ನಮ್ಮ ದೇಶವಾಸಿಗಳನ್ನು ಸುರಕ್ಷಿತವಾಗಿ ಕರೆತರುತ್ತಿದ್ದಾರೆ. ಇದರ ಹೊರತಾಗಿಯೂ, ಸಾವಿರಾರು ಭಾರತೀಯರು ಇನ್ನೂ ಉಕ್ರೇನ್‌ನಲ್ಲಿ ಜೀವ ಭಯದಲ್ಲಿ ವಾಸಿಸುತ್ತಿದ್ದಾರೆ. ಅನ್ನ ಕುಡಿಯಲು ನೀರಿಲ್ಲದೆ  ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಾಲ ಕಳೆಯುತ್ತಿದ್ದಾರೆ.

ಈ ನಿಟ್ಟಿನಲ್ಲಿ ನೇರವಾಗಿ ಫೀಲ್ಡಿಗಿಳಿದ ಪ್ರಧಾನಿ ಮೋದಿ ಝೆಲೆನ್ ಸ್ಕಿ ಜತೆ ಮಾತನಾಡುವುದು ಅನಿವಾರ್ಯವಾಗಿದೆ. ಮೋದಿ ಹಾಗೂ ಝೆಲೆನ್ಸ್ಕಿ ಜೊತೆ ಏನೇನು ಮಾತುಕತೆ ನಡೆಯುತ್ತದೆಯೋ..ಅದಕ್ಕೆ ಉಕ್ರೇನ್‌ ಅಧ್ಯಕ್ಷ ಒಪ್ಪುತ್ತಾರೆಯೋ..? ಉಭಯ ರಾಷ್ಟ್ರಗಳ ಮುಖ್ಯಸ್ಥರ ನಡುವಿನ ಮಾತುಕತೆ ಯುದ್ಧದ ಮೇಲೆ ಪರಿಣಾಮ ಬೀರುತ್ತದೆಯೇ..?  ಭಾರತೀಯರನ್ನು ಸ್ವದೇಶಕ್ಕೆ ಹಿಂದಿರುಗಿಸುವಲ್ಲಿ ಸರಿಯಾದ ಫಲಿತಾಂಶ ಸಿಗಲಿದಯೇ.. ಎಂಬುದನ್ನು ಕಾದು ನೋಡಬೇಕಾಗಿದೆ.

Share Post