Bengaluru

ರಾಜ್ಯ ಸರ್ಕಾರದಿಂದ SSLC ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್

ಬೆಂಗಳೂರು : ಈ ಬಾರಿ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್‌ ನ್ಯೂಸ್‌ ಒಂದು ಸಿಕ್ಕಿದೆ.  ಕೊರೊನಾ ಹಿನ್ನೆಲೆ ಶಾಲೆಗಳು ತಡವಾಗಿ ಶುರುವಾಗಿದ್ದವು. ಆದ ಕಾರಣ ಶಿಕ್ಷಕರು ಪಠ್ಯವನ್ನು ಪೂರ್ಣಗೊಳಿಸಲು ಅನೇಕ ತೊಂದರೆಗಳು ಉಂಟಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷ ೨೦% ಪಠ್ಯ ಕಡಿತ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಎಂದಿನಂತೆ ಈ ಬಾರಿಯೂ ಮಾರ್ಚ್‌ – ಏಪ್ರಿಲ್‌ ಅಲ್ಲಿ ಪರೀಕ್ಷೆ ನಡೆಯಲಿದೆ. ಕಡಿಮೆ ಸಮಯದಲ್ಲಿ ಪಠ್ಯ ಪೂರ್ತಿ ಮಾಡಲು ಕಷ್ಟ ಎಂಬ ಮಾತು ಎಲ್ಲೆಡೆ ವ್ಯಕ್ತವಾಗಿತ್ತು, ಮಕ್ಕಳಿಗೂ ಕಷ್ಟವಾಗತ್ತೆ ಎಂದು ಅರಿತ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

Share Post