International

ಅಮೆರಿಕ : ಮುಂದಿನ ನಾಲ್ಕು ವಾರದಲ್ಲಿ 60 ಸಾವಿರಕ್ಕೂ ಹೆಚ್ಚು ಸಾವು ಸಂಭವ

ವಾಷಿಂಗ್ಟನ್‌ : ಅಮೆರಿಕದ ರೋಗ ನಿಯಂತ್ರಣ ಮತ್ತು ಕೇಂದ್ರ ತಡೆ ಕೋವಿಡ್‌ ಕುರಿತು ನೀಡಿರುವ ವರದಿ ನಿಜಕ್ಕೂ ಭಯ ಹುಟ್ಟಿಸುವಂತಿದೆ. ಕೋವಿಡ್‌ 19 ಕಾರಣದಿಂದ ಮುಂದಿನ ನಾಲ್ಕು ವಾರಗಳಲ್ಲಿ ಸುಮಾರು 62 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುವ ಸಂಭವವಿದೆ ಎಂದು ರೋಗ ನಿಐಂತ್ರಣ ಕೇಂದ್ರ ತಡೆ ಮಾಹಿತಿ ನೀಡಿದೆ.

ಅಮೆರಿಕ ಮುಂದಿನ ನಾಲ್ಕು ವಾರಗಳಲ್ಲಿ ಕೋವಿಡ್‌ ಸಂಬಂಧಿತ ಸಾವಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದ್ದು, ಫೆಬ್ರುವರಿ 5ಕ್ಕೆ ಕೊನೆಗೊಳ್ಳುವ ವಾರದಲ್ಲಿ 10 ಸಾವಿರದಿಂದ 30 ಸಾವಿರ ಮಂದಿ ಸಾವಿಗೀಡಾಗಬಹುದು ಎಂದು ಅಂದಾಜಿಸಲಾಗಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಸುಮಾರು 3000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 2021ರ ಫೆಬ್ರುವರಿಯಿಂದ ಒಂದೇ ದಿನದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಸಾವಿನ ಸಂಖ್ಯೆ ಇದಾಗಿದೆ ಎಂದು ಸಿಡಿಸಿ ಮಾಹಿತಿ ನೀಡಿದೆ.

 

Share Post