International

ಅಫ್ಘಾನಿಸ್ತಾನದಲ್ಲಿ ಭಾರೀ ಪ್ರವಾಹ; 200ಕ್ಕೂ ಹೆಚ್ಚು ಮಂದಿ ದುರ್ಮರಣ!

ಅಫ್ಘಾನಿಸ್ತಾನ; ಅಪ್ಘಾನಿಸ್ತಾನದಲ್ಲಿ ಮಳೆ ಭೀಕರ ಸ್ವರೂಪ ಪಡೆದುಕೊಂಡಿದೆ.. ಭಾರೀ ಪ್ರವಾಹದಿಂದಾಗಿ ಜನರ ಬದುಕು ಅತಂತ್ರವಾಗಿದ್ದು, ಪ್ರವಾಹದಲ್ಲಿ ಸಿಲುಕಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.. 

ಉತ್ತರ ಅಫಘಾನಿಸ್ತಾನ ಭಾಗದಲ್ಲಿ ಎರಡು ದಿನಗಳಿಂದ ರಣಭೀಕರ ಮಳೆ ಸುರಿಯುತ್ತಿದೆ.. ಇದರಿಂದಾಗಿ ನದಿಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ಏರ್ಪಟ್ಟಿದೆ.. ಮನೆಗಳಿಗೂ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ.. ಪ್ರವಾಹದಲ್ಲಿ ಸಿಲುಕಿ ಜನ ಕೊಚ್ಚಿಕೊಂಡು ಹೋಗಿದ್ದಾರೆ..

ನೂರಾರು ದೇಹಗಳು ಕೆಸರಿನಲ್ಲಿ ಸಿಲುಕಿವೆ. ಅವುಗಳನ್ನು ಹೊರೆತೆಗೆಯುವ ಕಾರ್ಯ ನಡೆಯುತ್ತಿದೆ.. ಸದ್ಯ ರಾಷ್ಟ್ರೀಯ ಸೇವೆ ಮತ್ತು ಭದ್ರತಾ ಪಡೆಗಳು ಅವಶೇಷದಡಿ ಸಿಲುಕಿರುವ ಮೃತ ದೇಹಗಳನ್ನು ಹೊರ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

 

Share Post