International

ಮತ್ತೆ 11 ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್‌; ಕದನ ವಿರಾಮ 2 ದಿನ ವಿಸ್ತರಣೆ

ಇಸ್ರೇಲ್‌; ಹಮಾಸ್ ಇನ್ನೂ 11 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶರೋನ್ ಅಲೋನಿ ಎಂಬ ಮಹಿಳೆ ಮತ್ತು ಆಕೆಯ ಮೂರು ವರ್ಷದ ಅವಳಿಗಳಾದ ಎಮ್ಮಾ ಮತ್ತು ಯೂಲಿ ಕೂಡಾ ಸೇರಿದ್ದಾರೆ.

ಶರೋನ್ ಅವರ ಪತಿ ಡೇವಿಡ್ ಮತ್ತು ಅವರ ಸಹೋದರ ಏರಿಯಲ್ ಅವರು ಹಮಾಸ್‌ನಿಂದ ಇನ್ನೂ ಒತ್ತೆಯಾಳುಗಳಾಗಿದ್ದಾರೆ. ಬಿಡುಗಡೆಯಾದ ಎಲ್ಲರನ್ನೂ ಹಮಾಸ್ 52 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿತ್ತು.

ಈ 11 ಜನರ ಬಿಡುಗಡೆಗೆ ಬದಲಾಗಿ ಇಸ್ರೇಲ್ 33 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿತು. ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಹಮಾಸ್‌ನಿಂದ ತಪ್ಪಿಸಿಕೊಳ್ಳಲು ಶರೋನ್ ಕುಟುಂಬವು ಸುರಕ್ಷಿತ ಕೋಣೆಯಲ್ಲಿ ಅಡಗಿಕೊಂಡಿತ್ತು.

ಕೊಠಡಿಗೆ ಹಮಾಸ್ ಉಗ್ರರು ಬೆಂಕಿ ಹಚ್ಚಿದ್ದರು. ಕುಟುಂಬವು ಪ್ರಾಣಾಪಾಯದಿಂದ ಪಾರಾಗುತ್ತಿರುವಾಗ, ಹಮಾಸ್ ಅವರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿತು. ಅವರೊಂದಿಗೆ ಹಮಾಸ್ ಒತ್ತೆಯಾಳುಗಳಾಗಿದ್ದ ಇತರ ಕೆಲವು ಕುಟುಂಬ ಸದಸ್ಯರನ್ನು ಬಿಡುಗಡೆ ಮಾಡಿತು.

ಕದನ ವಿರಾಮ ಒಪ್ಪಂದವನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಿದ ನಂತರ ಕೈದಿಗಳು ಮತ್ತು ಒತ್ತೆಯಾಳುಗಳ ವಿನಿಮಯ ಮುಂದುವರಿಯಬಹುದು ಎಂದು ಅಂತರರಾಷ್ಟ್ರೀಯ ತಜ್ಞರು ಹೇಳುತ್ತಾರೆ.

Share Post