National

ಮಹಾರಾಷ್ಟ್ರ ಪೊಲೀಸರಿಗೂ ಕೋವಿಡ್‌ ಕಾಟ – 370 ಪೊಲೀಸರಿಗೆ ಸೋಂಕು

ಮುಂಬೈ : ಮಹಾರಾಷ್ಟ್ರದಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್‌ ಅನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಪೊಲೀಸರಿಗೆ ಕೊರೊನಾ ಪಾಸಿಟಿವ್‌ ಬರುತ್ತಿದ್ದು , ಸರ್ಕಾರ ಆತಂಕಕ್ಕೆ ಒಳಗಾಗಿದೆ. ಕಳೆದ 24 ಗಂಟೆಯಲ್ಲಿ ಕನಿಷ್ಠ 370  ಪೊಲೀಸರಿಗೆ ಕೋವಿಡ್‌ ದೃಢಪಟ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದೆಹಲಿಯಲ್ಲಿಯೂ ಇದೇ ರೀತಿ ಪೊಲೀಸರು ಕೊರೊನಾಗೆ ತುತ್ತಾಗಿದ್ದರು. ಸಾವಿರಕ್ಕೂ ಹೆಚ್ಚು ಪೊಲೀಸರು ಕೋವಿಡ್‌ಗೆ ತುತ್ತಾಗಿದ್ದರು. ಈಗ ಮಹಾರಾಷ್ಟ್ರ ಪೊಲೀಸರ ಸರದಿಯಂತೆ ಕಾಣ್ತಿದೆ.

370 ಸೋಂಕಿತರಲ್ಲಿ 60 ಅಧಿಕಾರಿಗಳು ಮತ್ತು 310 ಕಾನ್ಸ್ಟೇಬಲ್‌ಗಳಾಗಿದ್ದಾರೆ. ಈಗ ರಾಜ್ಯಾದ್ಯಂತ ಒಟ್ಟು 504 ಅಧಿಕಾರಿಗಳು 1678 ಪೊಲೀಸ್‌ ಕಾನ್ಸ್ಟೇಬಲ್‌ಗಳು ಸೋಂಕಿನಿಂದ ಬಳಲುತ್ತಿದ್ದಾರೆ.

ಕೋವಿಡ್‌ ಮೊದಲ ಅಲೆಯಿಂದ ಇಲ್ಲಿಯವರೆಗೂ ಒಟ್ಟಾರೆಯಾಗಿ 48,611 ಸಿಬ್ಬಂದಿಗೆ ಸೋಂಕು ತಗುಲಿತ್ತು. ಇದರಲ್ಲಿ 46 ಅಧಿಕಾರಿಗಳು ಮತ್ತು 458 ಕಾನ್ಸ್ಟೇಬಲ್‌ಗಳು ಸಾವೀಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 46,723 ಕೇಸ್‌ಗಳು ಪತ್ತೆಯಾಗಿವೆ. ನಿನ್ನೆಗಿಂತ ಶೇ27ರಷ್ಟು ಕೇಸ್‌ಗಳು ಹೆಚ್ಚಳವಾಗಿದೆ.

Share Post