International

ಮಂಜು ಕವಿದ ವಾತಾವರಣದಿಂದ 50 ವಾಹನಗಳ ನಡುವೆ ಸರಣಿ ಅಪಘಾತ: ಮೂವರು ಸಾವು

ಅಮೆರಿಕಾ: ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ಮಂಜು ಕವಿದ ವಾತಾವರಣದಿಂದ ಈ ಅವಘಡ ಸಂಭವಿಸಿದೆ. ಹಿಮಪಾತದ ಪರಿಣಾಮವಾಗಿ, ಪೆನ್ಸಿಲ್ವೇನಿಯಾ ಹೆದ್ದಾರಿಯಲ್ಲಿ 50 ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಅಮೆರಿಕದ ಪೆನ್ಸಿಲ್ವೇನಿಯಾ ಹೆದ್ದಾರಿಯಲ್ಲಿ ಭಾರಿ ಹಿಮ ಬಿದ್ದಿದೆ. ಭಾರೀ ಹಿಮಪಾತದಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಈ ಸಂದರ್ಭದಲ್ಲಿ 50 ರಿಂದ 60 ವಾಹನಗಳು ಸರಣಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ 50 ವಾಹನಗಳಲ್ಲಿ ಕಾರುಗಳು,  ಟ್ರ್ಯಾಕ್ಟರ್ ಮತ್ತು ಟ್ರಾಲಿಗಳು ಸೇರಿವೆ.

ಅಪಘಾತದ ನಂತರ ಹೆದ್ದಾರಿಯಲ್ಲಿ ಹಿಮವನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಒಂದೇ ತಿಂಗಳಲ್ಲಿ ಎರಡನೇ ಬಾರಿ ಇಂತಹ  ದುರಂತ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share Post