International

ಪತನಗೊಂಡ ಸೇನಾ ಹೆಲಿಕಾಪ್ಟರ್‌ ವಿಶೇಷತೆ

ರಷ್ಯಾ: ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು Mil Mi-17 (NATO ವರದಿ ಪ್ರಕಾರ ಇದನ್ನು ಹಿಪ್‌) ಎಂಬ ಹಿಸರಿನಿಂದ ಕರೆಯಲ್ಪಡುತ್ತದೆ. ಈ ಹೆಲಿಕಾಪ್ಟರ್‌ ಸೋವಿಯತ್ ರಷ್ಯಾ ವಿನ್ಯಾಸದ ಮಿಲಿಟರಿ ಹೆಲಿಕಾಪ್ಟರ್ ಆಗಿದೆ. ಕಜಾನ್ ಮತ್ತು ಉಲಾನ್-ಉಡೆ ಎಂಬ ಎರಡು ಕಾರ್ಖಾನೆಗಳು ಈ ಚಾಪರ್‌ ಅನ್ನು ತಯಾರಿಸಿದೆ. ರಷ್ಯಾದ ಸೇನೆಯಲ್ಲಿ ಇದನ್ನು Mi-8M ಸರಣಿ ಎಂದು ಕರೆಯಲಾಗುತ್ತದೆ. ಹೆಲಿಕಾಪ್ಟರ್ ಅನ್ನು ಹೆಚ್ಚಾಗಿ ಮಧ್ಯಮ, ಅವಳಿ-ಟರ್ಬೈನ್, ಸಾರಿಗೆ ಹೆಲಿಕಾಪ್ಟರ್ ಆಗಿ ಬಳಸಲಾಗುತ್ತದೆ, ಈ ಹೆಲಿಕಾಪ್ಟರ್‌ ಎರಡು ಎಂಜಿನ್‌ಗಳು ಕೆಲಸ ಮಾಡುತ್ತವೆ ಜೊತೆಗೆ ಸಶಸ್ತ್ರ ಗನ್‌ಶಿಪ್ ಆವೃತ್ತಿಯನ್ನು ಒಳಗೊಂಡಿದೆ. ಮೊದಲನೆ ಬಾರಿ 1975 ರಲ್ಲಿ ಉತ್ಪಾದನೆ ಮಾಡಲಾಯಿತು. ನಂತರ 1977ರಲ್ಲಿ ಸೇನೆಗೆ ಪರಿಚಯ ಮಾಡಿಕೊಟ್ರು. 2007ರವರೆಗೆ ಸುಮಾರು 12,000 ಹೆಲಿಕಾಪ್ಟರ್‌ಗಳನ್ನು ರಷ್ಯಾ ನಿರ್ಮಾಣ ಮಾಡಿದೆ.

 

Share Post