ಟಿಪ್ಪು ಮೈಸೂರು ಹುಲಿ ಅಲ್ಲ, ಇಲಿ; ಶಾಸಕ ಅಪ್ಪಚ್ಚು ರಂಜನ್
ಬೆಂಗಳೂರು: ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅಲ್ಲ, ಮೈಸೂರು ಇಲಿ ಆಗಬೇಕು ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಸಾವಿರಾರು ಕೊಡವರನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಲಾ ಪಠ್ಯದಲ್ಲಿರುವ ಅಸತ್ಯ ತೆಗೆಯುವಂತೆ ಶಿಕ್ಷಣ ಸಚಿವರಿಗೆ ಹೇಳಿದ್ದೇವೆ. ಬ್ರಿಟನ್ ಲೈಬ್ರರಿಯಿಂದ ಪುಸ್ತಕ, ದಾಖಲೆ ಕೊಟ್ಟಿದ್ದೇವೆ. ಅದರಲ್ಲಿ ಕೊಡಗಿನ ಸುಮಾರು ಮನೆಗಳ ಹೆಸರುಗಳ ಸಹಾ ಇವೆ. ಔತಣಕ್ಕೆಂದು ಕರೆದು ಸಾವಿರಾರು ಕೊಡವರ ಮಾರಣಹೋಮ ಮಾಡಲಾಗಿತ್ತು. ಅದರ ದಾಖಲೆಗಳನ್ನು ಶಿಕ್ಷಣ ಸಚಿವರಿಗೆ ನೀಡಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಸಚಿವರಿಗೆ 16 ಪುಟಗಳ ವಿವರಗಳನ್ನು ನೀಡಲಾಗಿದೆ. ಇದರ ಆಧಾರದ ಮೇಲೆ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಇದೇ ವೇಳೆ ತಿಳಿಸಿದ್ದಾರೆ.