International

ಬಲವಂತವಾಗಿ ನಮ್ಮನ್ನು ಯುದ್ಧಕ್ಕೆ ಕಳಿಸಲಾಗುತ್ತಿದೆ-ರಷ್ಯಾದ ತರಬೇತಿ ಸೈನಿಕನ ಅಳಲು

ರಷ್ಯಾ: ಯುದ್ಧ ಮಾಡೋದು ಬರಲಿ.. ಬರದಿರಲಿ..ಯುದ್ಧ ಮಾಡಿದ ಅನುಭವ ಇಲ್ಲದಿದ್ದರೂ ಸರ್ಕಾರ ಯುದ್ಧ ಮಾಡು ಎಂದು ಆದೇಶ ನೀಡಿದ್ರೆ ಸಾಕು.. ಯುದ್ಧಭೂಮಿಯಲ್ಲಿ ಪ್ರಾಣ ಕೊಡಲು ಅಥವಾ ಪ್ರಾಣ ತೆಗೆಯಲು ಸಿದ್ಧರಾಗಬೇಕು. ಸೈನಿಕನ ಇಷ್ಟ-ಕಷ್ಟಗಳನ್ನು ಯಾರೂ ಕೇಳುವುದಿಲ್ಲ. ಅವರು ಮಾಡಬೇಕಾಗಿರುವುದಿಷ್ಟೇ ಎದುರಾಳಿಗಳನ್ನು ಕೊಲ್ಲುವುದು ಅಥವಾ ಅವರ ಕೈಯಲ್ಲಿ ಸಾಯುವುದು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಅದೇ ಸಂಭವಿಸುತ್ತಿದೆ. ರಷ್ಯಾ ಸೈನಿಕರಿಗೆ ಉಕ್ರೇನಿಯನ್ ಸೈನಿಕರೊಂದಿಗೆ ಯಾವುದೇ ದ್ವೇಷವಿಲ್ಲ. ಆದರೆ ತಮ್ಮ ದೇಶದ ಆಜ್ಞೆಯ ಮೇರೆಗೆ ಕೊಲ್ಲಬೇಕು ಅಥವಾ ಸಾಯಬೇಕು.

ಈ ನಡುವೆ ಉಕ್ರೇನ್‌ ಸೇನೆಗೆ ಸೆರೆಸಿಕ್ಕಿರುವ ರಷ್ಯಾ ಸೈನಿಕರನ್ನು ಸಂದರ್ಶನ ಮಾಡಿದಾಗ ಕೆಲವು ಹೃದಯ ವಿದ್ರಾವಕ ವಿಚಾರಗಳು ಬೆಳಕಿಗೆ ಬಂದಿವೆ.  ಬಂಧಿತ ರಷ್ಯಾದ ಸೈನಿಕರು “ನಾವು ಗುಂಡೇಟಿಗೆ ಬಲಿಯಾಗಲು ಟೈನಿಂಗ್‌ನಿಂದ ನಮ್ಮನ್ನು  ಯುದ್ಧಕ್ಕೆ ಕಳುಹಿಸಲ್ಪಟ್ಟಿದ್ದೇವೆ” ಎಂದು ಕಣ್ಣೀರು ಹಾಕಿದ್ದಾರೆ. ಮತ್ತೊಬ್ಬ ಯುವ ಸೈನಿಕ, ‘ನನ್ನನ್ನು ಸಾಯಲು ಇಲ್ಲಿಗೆ ಕಳುಹಿಸಲಾಗಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮಾ,ʼ ಎಂದು ಅಳಲನ್ನು ತೋಡಿಕೊಂಡಿದ್ದಾನೆ.  ಸೈನಿಕರು ಯುದ್ಧವನ್ನು ಬಯಸುವುದಿಲ್ಲ ಮತ್ತು ತಮ್ಮ ಸೇನೆಯಲ್ಲಿರುವ ಪ್ರತಿಯೊಬ್ಬರೂ ಸುರಕ್ಷಿತವಾಗಿ ಮನೆಗೆ ಹೋಗಬೇಕೆಂದು ಅವರ ಇಚ್ಛೆಯಂತೆ. ಉಕ್ರೇನಿಯನ್ನರು ಈ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋಗಳು ವೈರಲ್ ಆಗುತ್ತಿವೆ.

ಏತನ್ಮಧ್ಯೆ, ಉಕ್ರೇನ್‌ನಲ್ಲಿ ಬಂದಿಯಾಗಿರುವ ರಷ್ಯಾ ಸೈನಿಕರಿಗೆ ಉಕ್ರೇನ್ ಮಹಿಳೆಯರು ಆಹಾರ ನೀಡುತ್ತಿದ್ದಾರೆ.ಅವರು ತಮ್ಮ ತಾಯಿಯೊಂದಿಗೆ ಮಾತನಾಡಲು ವೀಡಿಯೊ ಕರೆಗಳನ್ನು ಮಾಡಿಕೊಡುತ್ತಿದ್ದಾರೆ. ಯುವ ಯೋಧನೊಬ್ಬ ತನ್ನ ತಾಯಿಯೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವ ಕಣ್ಣೀರಿನ ವಿಡಿಯೋ ವೈರಲ್ ಆಗಿದೆ.

Share Post