BEAUTY OF UKRAINE: ತನ್ನ ದೇಶಕ್ಕಾಗಿ ಹೋರಾಡಲು ಶಸ್ತ್ರಾಸ್ತ್ರ ಹಿಡಿದ ಉಕ್ರೇನ್ ಬ್ಯೂಟಿ ಕ್ವೀನ್
ಕೀವ್: ಉಕ್ರೇನ್ ದೇಶದ ಪ್ರಜೆಗಳು ತನ್ನ ದೇಶದ ಬಗ್ಗೆ ಅಭಿಮಾನ ಮೆರೆಯುತ್ತಿದ್ದಾರೆ. ತನ್ನ ದೇಶದ ಪರವಾಗಿ ಹೋರಾಡಲು ಮುಂದೆ ಬರುತ್ತಿದ್ದಾರೆ. ಮೊನ್ನೆಯಷ್ಟೇ ಮದುವೆಯಾದ ಮಾರನೆಯ ದಿನವೂ ವಧು ವರರಿಬ್ಬರೂ ಯುದ್ಧ ಭೂಮಿಗೆ ಇಳಿದಿದ್ದರು. ರಷ್ಯಾ ವಿರುದ್ಧ ಸೆಟೆದು ನಿಂತಿದ್ದರು. ಇದೀಗ ಉಕ್ರೇನ್ ಬ್ಯೂಟಿ ಕ್ವೀನ್ ಸರದಿ. ಮಿಸ್ ಗ್ರಾಂಡ್ ಉಕ್ರೇನ್ ಸ್ಪರ್ಧೆ ವಿಜೇತರಾಗಿರುವ ಅನಸ್ಟಾಸಿಯಾ ಲೆನ್ನಾ ಶಸ್ತ್ರಾಸ್ತ್ರ ಹಿಡಿದು ಯುದ್ಧಭೂಮಿಗೆ ಧುಮುಕಿದ್ದಾರೆ.
ರೈಫಲ್ ಹಿಡಿದು ಲೆನ್ನಾ ಉಕ್ರೇನ್ ಸೈನಿಕರ ಜೊತೆ ಸೇರಿ ರಷ್ಯಾ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ರೈಫಲ್ ಹಿಡಿದಿರುವ ಲೆನ್ನಾ ಅವರ ಚಿತ್ರಗಳ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.