International

“ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಒಬ್ಬ INTERNATIONAL ಭಿಕ್ಷುಕ” : ಜಮಾಯತ್ ಮುಖ್ಯಸ್ಥ

ಇಸ್ಲಾಮಾಬಾದ್‌ : ಜಮಾಯತ್‌ ಮುಖ್ಯಸ್ಥ ಸಿರಾಜುಲ್ ಹಕ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಟೀಕಿಸಿದ್ದಾರೆ.

ಸಿರಾಜುಲ್‌ ಹಕ್‌ ಅವರು ಪಾಕಿಸ್ತಾನದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ,  ಇಮ್ರಾನ್‌ ಖಾನ್‌ ಪ್ರಧಾನಿ ಸ್ಥಾನದಿಂದ ಮೊದಲು ತೊಲಗಬೇಕು, ಅವನೊಬ್ಬ ಇಂಟರ್ನ್ಯಾಶನಲ್‌ ಭಿಕ್ಷುಕ ಎಂದು ಕಿಡಿ ಕಾರಿದ್ದಾರೆ. ಭಾರತದ ಆರ್ಥಿಕತೆಗಿಂತ ಪಾಕಿಸ್ತಾನದ ಆರ್ಥಿಕತೆ ಚೆನ್ನಾಗಿದೆ ಎಂದು ಪಾಕ್‌ ಪ್ರಧಾನಿ ಕೆಲವು ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದರು.

ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಒಂದು ಶತಕೋಟಿ ಡಾಲರ್ ಸಾಲ ಎತ್ತುವಳಿ ಯೋಜನೆ  ಮೂಲಕ ತಾನು ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಪಾಕ್ ಪ್ರಧಾನಿ ಸಾಭೀತು ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳೂ ಏನು ಮಾಡಲಿಲ್ಲ. ನಾನು ಆರ್ಥಿಕ ತಜ್ಞ ಎಂದು ಬಡಾಯಿ ಕೊಚ್ಚಿಕೊಂಡು ಬಂದ ಇಮ್ರಾನ್‌ ಖಾನ್‌ ಕೂಡ ಏನೂ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.

 

Share Post