International

ತೀವ್ರಗೊಂಡ ರಷ್ಯಾ ದಾಳಿ; ಕೀವ್‌ ನಗರ ವಶಪಡಿಸಿಕೊಳ್ಳಲು ಯತ್ನ

ಕೀವ್‌: ಉಕ್ರೇನ್‌ ರಾಜಧಾನಿ ಕೀವ್‌ ನಗರವನ್ನು ವಶಪಡಿಸಿಕೊಳ್ಳಲು ರಷ್ಯಾ ಹರಸಾಹಸಪಡುತ್ತಿದೆ. ಕೀವ್‌ ನಗರದ ಸುತ್ತ ಸುಮಾರು 25 ಕಿಲೋ ಮೀಟರ್‌ವರೆಗೆ ರಷ್ಯಾ ಸೈನಿಕರು ಸುತ್ತುವರಿದಿದ್ದಾರೆ. ರಷ್ಯಾ ಉದ್ದೇಶವೇ ಕೀವ್‌ ನಗರವನ್ನು ವಶಪಡಿಸಿಕೊಳ್ಳೋದು. ಅದಕ್ಕಾಗಿ ರಷ್ಯಾ ಸೈನಿಕರು ದಾಳಿ ಮುಂದುವರೆಸಿದ್ದಾರೆ.

ಇನ್ನೊಂದೆಡೆ ಉಕ್ರೇನ್‌ ಸೈನಿಕರು ಕೂಡಾ ರಷ್ಯಾ ಸೈನಿಕರು ಕೀವ್‌ ನಗರ ಪ್ರವೇಶ ಮಾಡದಂತೆ ದಿಟ್ಟ ಉತ್ತರ ನೀಡುತ್ತಿದ್ದಾರೆ. ಉಕ್ರೇನ್‌ ಪರವಾಗಿ ನಿಂತು ರಷ್ಯಾ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಕೀವ್‌ ನಗರ ಈಗ ರಣರಂಗವಾಗಿ ಮಾರ್ಪಟ್ಟಿದೆ.

ಇನ್ನು ಇವತ್ತು ಕೂಡಾ ರಷ್ಯಾ ಸೇನೆ ಮಾರಣಹೋಮ ಮುಂದುವರೆಸಿದೆ. ಇಂದು ಉಕ್ರೇನ್‌ನ 8 ಯೋಧರನ್ನು ರಷ್ಯಾ ಸೇನೆ ಹೊಡೆದುರುಳಿಸಿದೆ. ಅಷ್ಟೇ 19ಕ್ಕೂ ಹೆಚ್ಚು ಉಕ್ರೇನ್‌ ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

 

Share Post