ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು: ಪೋಷಕರ ಆತಂಕ
ಉಕ್ರೇನ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಹಿನ್ನೆಲೆ ಇಂದು ಭಾರತಕ್ಕೆ ಬರಬೇಕಿದ್ದ ಕರ್ನಾಟಕದ ಇಬ್ಬರು ವಿದ್ಯಾರ್ಥಿನಿಯರು ಉಕ್ರೇನ್‌ನಲ್ಲಿಯೇ ಸಿಲುಕಿದ್ದಾರೆ. ಇಂದು ಬೆಳಗ್ಗೆ ಉಕ್ರೇನ್‌ಗೆ ತೆರಳಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬರಬೇಕಿತ್ತು. ಅಷ್ಟರಲ್ಲಗಲೇ ರಷ್ಯಾ ಬಾಂಬ್ ದಾಳಿ ನಡೆಸಿದ್ದರಿಂದ ವಿದ್ಯಾರ್ಥಿನಿಯರು ಅಲ್ಲಿಯೇ ಸಿಲುಕಿದ್ದಾರೆ ಎಂದು ಸುನೇಹಾ ತಂದೆ ತಿಪ್ಪೇಸ್ವಾಮಿ ತಿಳಿಸಿದ್ರು. ಎಂಬಿಬಿಎಸ್ ಫೈನಲ್ ಇಯರ್ ಓದುತ್ತಿರುವ ಚಿತ್ರದುರ್ಗ ಮೂಲಕ ಸುನೇಹಾ ಮತ್ತು ಅವರ ಸ್ನೇಹಿತೆ ರಚನಾ ಕೂಡ ಇಬ್ಬರು ಇಂದು ಭಾರತಕ್ಕೆ ಬರಬೇಕಿತ್ತು. ಯುದ್ಧದಿಂದಾಗಿ ಹೈದರಾಬಾದ್ ಮೂಲದ ಸ್ನೇಹಿತರೊಬ್ಬರು ಕೀವ್‌ನಲ್ಲಿ ಇದ್ದಾರೆ. ಅವರ ಮನೆಯಲ್ಲಿ ಈಗ ನಮ್ಮ ಮಕ್ಕಳು ಇದ್ದಾರೆ ಎಂಬ ಮಾಹಿತಿಯನ್ನು ತಿಪ್ಪೇಸ್ವಾಮಿ ನೀಡದ್ರು.
ಇನ್ನು ಕಲಬುರಗಿ ವಿದ್ಯಾರ್ಥಿನಿ ಜೀವಿತಾ ಕೂಡಾ ಉಕ್ರೇನ್ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಜನ ತರಕಾರಿ, ಹಣ್ಣು ನಿತ್ಯ ಗೃಹಪಯೋಗಿ ವಸ್ತುಗಳನ್ನು ಕೊಳ್ಳಲು ಕ್ಯೂ ನಿಂತಿದ್ದಾರೆ. ಎಂಟಿಎಂನಲ್ಲಿ ಹಣ ಡ್ರಾ ಮಾಡಲು ಕೂಡ ಸಾಲು ಸಾಲಾಗಿ ನಿಂತಿದ್ದಾರೆ. ಅಪಾರ್ಟ್‌ಮೆಂಟ್ ಕೆಳಗಡೆ ದೊಡ್ಡ ದೊಟ್ಟ ಬಂಕರ್‌ಗಳನ್ನು ಇಟ್ಟಿದ್ದಾರೆ. ದೊಡ್ಡ ಮಟ್ಟದ ದಾಳಿಯಾದಲ್ಲಿ ಬಂಕರ್‌ಗಳಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ತೆ ಮಾಡಿದ್ದಾರೆ. ಪರಿಸ್ಥಿತಿ ಹದಗೆಡುವ ಮುನ್ನ ಜನರ ನಿತ್ಯ ಸರಕುಗಳಿಗಾಗಿ ಮುಗಿ ಬೀಳುತ್ತಿದ್ದಾರಂತೆ. ಇನ್ನೂ ಸುರಕ್ಷತೆ ಸ್ಥಳಗಳಿಗೆ ತೆರಳಲು ಮೆಟ್ರೋ ನಿಲ್ದಾಣಗಳಲ್ಲಿ ಜನಜಂಗುಳಿ ಏರ್ಪಟ್ಟಿದೆ ಎಂಬ ಮಾಹಿತಿಯನ್ನು ಜೀವಿತಾ ನೀಡಿದ್ರು. FEb28ಕ್ಕೆ ನನಗೆ ಟಿಕೆಟ್ ಬುಕ್ ಆಗಿತ್ತು ಅಷ್ಟರಲ್ಲಿ ಯುದ್ಧ ಘೋಷಣೆ ಆಗಿದೆ. ಎಂಬಸಿ ಸೂಚನೆ ಕೊಟ್ಟ ಬಳಿಕ ನಾವು ಹೊರಡುತ್ತೇವೆ ಎಂಬ ಮಾಹಿತಿಯನ್ನು ಜೀವಿತಾ ಹೇಳಿದ್ರು.