ನಾಲ್ಕನೇ ಬೂಸ್ಟರ್ ಡೋಸ್ ಅನುಮೋದಿಸಿದ ಇಸ್ರೇಲ್
ಇಸ್ರೇಲ್ : ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಇಸ್ರೇಲ್ನಲ್ಲಿ ಕೋವಿಡ್-19 ವಿರುದ್ಧದ ಲಸಿಕೆಯ 4ನೇ ಬೂಸ್ಟರ್ ನೀಡಲು ಇಸ್ರೇಲ್ ಅನುಮೋದನೆ ನೀಡಿದೆ.
ಓಮಿಕ್ರಾನ್ ಸೋಂಕಿನ ತಡೆಗಟ್ಟಲು ಬೂಸ್ಟರ್ ಡೋಸ್ ಅಗತ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳು ಈಗಾಗಲೇ ಕೋವಿಡ್-19 ಲಸಿಕೆಯ 3ನೇ ಡೋಸ್ ಆಗಿ ಬೂಸ್ಟರ್ ಡೋಸ್ ನೀಡುತ್ತಿವೆ. ಈ ನಡುವೆಯೇ ಇಸ್ರೇಲ್ 4ನೇ ಬೂಸ್ಟರ್ ನೀಡಲು ಅನುಮೋದನೆ ನೀಡಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎನಿಸಿಕೊಂಡಿದೆ.
ಆರೋಗ್ಯ ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕ ನಾಚ್ಮನ್ ಆಶ್ ನಾಲ್ಕನೇ ಬೂಸ್ಟರ್ ಡೋಸ್ ನೀಡುವಂತೆ ಅನುಮೋದಿಸಿದ್ದಾರೆ.
ಇಸ್ರೇಲ್ನ 90.4 ಲಕ್ಷ ಮಂದಿಗಳ ಪೈಕಿ 40 ಲಕ್ಷಕ್ಕೂ ಹೆಚ್ಚು ಜನ ಮೂರನೇ ಡೋಸ್ ಪಡೆದುಕೊಂಡಿದ್ದಾರೆ.