ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಟವಿಲ್ಲ
ದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕೊಂಚ ಕಡಿಮೆಗೊಂಡಿತ್ತು. ಇದ್ದರಿಂದ ಜನರು ಕೂಡ ನಿರಾಳವಾಗಿದ್ದರು. ಜೊತೆಗೆ ಸೇವೆಯನ್ನು ಡಿಸೆಂಬರ್ 15 ರಿಂದ ಪ್ರಾರಂಭಿಸಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿತ್ತು. ಆದರೆ ಇದೀಗ ಕೊರೋನಾ ರೂಪಂತಾರಿ ಒಮಿಕ್ರಾನ್ ಎಲ್ಲೆಡೆ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ಹೊರಗಡೆಯಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಹಿಂಪಡೆದುಕೊಂಡಿದೆ. ಮುಂದಿನ ವರ್ಷ ಜನವರಿ 31 ವರೆಗೂ ವಿಮಾನ ಹಾರಾಟವಿಲ್ಲ.ಈಗಾಗಲೇ ಜಗತ್ತಿಗೆ ಒಮಿಕ್ರಾನ್ ಎಂಬ ಕೋವಿಡ್-19ನ ಹೆಚ್ಚು ಹರಡುವ ರೂಪಾಂತರದ ಬಗ್ಗೆ ಭಯ ಆವರಿಸಿದೆ. ಈಗಲೂ ಸಹ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕೋವಿಡ್ – 19 ಪ್ರಕರಣಗಳಲ್ಲೂ ಮತ್ತೆ ಏರಿಕೆ ಕಾಣುತ್ತಿದೆ.ಈ ಹಿನ್ನೆಲೆ ಕೇಂದ್ರ ಸರ್ಕಾರ 2022 ರ ಜನವರಿ 31 ರವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನೂ ಸ್ಥಗಿತಗೊಳಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಇತರ ದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಸಾಗಿಸಲು ನಾಗರಿಕ ವಿಮಾನಯಾನ ಸಚಿವಾಲಯವು ವಂದೇ ಭಾರತ್ ವಿಮಾನಗಳನ್ನು ಪ್ರಾರಂಭಿಸಿತ್ತು.