International

RUSSIA-UKAIN WAR; ಉಕ್ರೇನ್‌ ದಾಳಿಗೆ ರಷ್ಯಾ ಸುಖೋಯ್‌ ಛಿದ್ರಛಿದ್ರ

ಕೀವ್‌; ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದವರೆಸಿದೆ. ಆದ್ರೆ, ರಷ್ಯಾ ಎಷ್ಟೇ ಪ್ರಬಲವಾಗಿದ್ದರೂ ಉಕ್ರೇನ್‌ ಮಾತ್ರ ಹೋರಾಟ ನಿಲ್ಲಿಸಿಲ್ಲ. ರಷ್ಯಾಗೆ ಪ್ರತಿಯಾಗಿ ಹೋರಾಡುತ್ತಲೇ ಇದೆ. ಈಗಾಗಲೇ ನೂರಾರು ರಷ್ಯಾ ಸೈನಿಕರನ್ನು ಉಕ್ರೇನ್‌ ಬಲಿ ಪಡೆದಿದೆ. ಅಷ್ಟೇ ಅಲ್ಲ, ಹಲವಾರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಇದೀಗ ಉಕ್ರೇನ್‌ ಸೈನಿಕರು, ರಷ್ಯಾದ ಪ್ರಬಲ ಯುದ್ಧ ವಿಮಾನ ಸುಖೋಯ್‌ ಅನ್ನು ಛಿದ್ರಛಿದ್ರ ಮಾಡಿದ್ದಾರೆ.

ರಷ್ಯಾ ಸುಖೋಯ್‌ಎಸ್‌ಯು-೨೫ ವಿಮಾನ ಉಕ್ರೇನ್‌ನ ಮೆರಿಕವ್‌ ಮೇಲೆ ದಾಳಿ ಮಾಡುತ್ತಿತ್ತು. ಈ ವೇಳೆ ಪ್ರತಿದಾಳಿ ಮಾಡಿದ ಉಕ್ರೇನ್‌ ಸೈನಿಕರು, ಅದನ್ನು ಹೊಡೆದುರುಳಿಸಿದ್ದಾರೆ. ಉಕ್ರೇನ್‌ ಸೈನಿಕರ ದಾಳಿಗೆ ಸುಖೋಯ್‌ ಯುದ್ಧ ವಿಮಾನ ಛಿದ್ರಛಿದ್ರವಾಗಿ ಬಿದ್ದಿದೆ.

Share Post