International

ಉಕ್ರೇನ್‌ನ ಮತ್ತೊಂದು ಅಣುಸ್ಥಾವರದ ಮೇಲೆ ರಷ್ಯಾ ಕಣ್ಣು..ದಾಳಿ ಮಾಡಲು ಸಿದ್ಧತೆ

ಉಕ್ರೇನ್:‌ ಪುಟಿನ್ ಪಡೆ ಯುದ್ಧವನ್ನು ತೀವ್ರಗೊಳಿಸುತ್ತಿವೆ. ಉಕ್ರೇನ್ ನ ಪ್ರಮುಖ ನಗರಗಳು ಹಾಗೂ ಅಣುಸ್ಥಾವರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ.ಯುರೋಪಿನಲ್ಲಿರುವ ಉಕ್ರೇನ್ ನ ಅತಿ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ಈಗಾಗಲೇ ಗುಂಡಿನ ದಾಳಿ ನಡೆಸಿದೆ. ಮತ್ತೊಂದು ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಕಣ್ಣಾಕಿದೆ. ಉಕ್ರೇನ್‌ನ ಮಿಖಾಯಿಲ್ ಪ್ರದೇಶದಲ್ಲಿರುವ ಎರಡನೇ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ಗಮನಹರಿಸುತ್ತಿದೆ.

ಈ ಪರಮಾಣು ಸ್ಥಾವರದ ಸಮೀಪದಲ್ಲಿ ರಷ್ಯಾದ ಪಡೆ ನುಗ್ಗುತ್ತಿದೆ. ರಷ್ಯಾ ಪರಮಾಣು ವಿದ್ಯುತ್ ಸ್ಥಾವರಗಳನ್ನು ವಶಪಡಿಸಿಕೊಂಡ ಬಗ್ಗೆ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ. ಪರಮಾಣು ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯು ಜಾಗತಿಕ ದುರಂತಕ್ಕೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ರಷ್ಯಾದ ಸೇನೆ ಈಗಾಗಲೇ ನಗರದ ಮೇಲೆ ದಾಳಿ ಮಾಡಿ ಪೋರ್ಟ್ ಸಿಟಿಯನ್ನು ವಶಪಡಿಸಿಕೊಂಡಿವೆ. ರಷ್ಯಾದ ಪಡೆಯನ್ನು ಹಿಮ್ಮೆಟ್ಟಿಸಲು ಉಕ್ರೇನ್ ಸೇನೆಯೂ ಪ್ರತಿದಾಳಿ ನಡೆಸುತ್ತಿದೆ. ಆದರೆ ಈ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದು  ನಾಗರಿಕರು ಮತ್ತು ಸೈನಿಕರು ಮಾತ್ರ.

ಪರಮಾಣು ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಗಳು ವಿನಾಶಕಾರಿ ಎಂದು ತಿಳಿದಿದ್ದರೂ, ಆ ಪ್ರದೇಶಗಳ ಮೇಲೆ ರಷ್ಯಾ ಗುರಿಯಾಗಿರುವುದು ವಿಶ್ವದ ಆತಂಕಕ್ಕೆ ಕಾರಣವಾಗಿದೆ. ಅತ್ಯಂತ ಅಪಾಯಕಾರಿ ಪರಮಾಣು ವಿದ್ಯುತ್ ಸ್ಥಾವರಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಪ್ರಯತ್ನಿಸುತ್ತಿದೆ. ಉಕ್ರೇನ್‌ನಲ್ಲಿರುವ ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪ್ರೋಜಾಹಿಯಾ ಪರಮಾಣು ಸ್ಥಾವರದ ಮೇಲೆ ರಷ್ಯಾ ರಾಕೆಟ್ ದಾಳಿಯನ್ನು ಪ್ರಾರಂಭಿಸಿದೆ.  ರಷ್ಯಾ ದಾಳಿ ಉಕ್ರೇನ್‌ನಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳ ಸುರಕ್ಷತೆಯ ಬಗ್ಗೆ ಮತ್ತಷ್ಟು ಕಳವಳವನ್ನು ಉಂಟುಮಾಡಿದೆ.

Share Post