ಸರ್ಕಾರಿ ಆಸ್ಪತ್ರೆ ಮೇಲ್ಛಾವಣಿಯಲ್ಲಿ 200 ಕೊಳೆತ ಶವ ಪತ್ತೆ
ಇಸ್ಲಾಮಾಬಾದ್; ಪಾಕಿಸ್ತಾನದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯೊಂದರ ಮೇಲ್ಛಾವಣಿಯಲ್ಲಿ 200ಕ್ಕೂ ಹೆಚ್ಚು ಕೊಳೆತ ಮೃತದೇಹಗಳು ಪತ್ತೆಯಾಗಿವೆ. ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಈ ದೇಹಗಳು ಸಿಕ್ಕಿವೆ.
ಪಂಜಾಬ್‌ನ ಮುಖ್ಯಮಂತ್ರಿ ಚೌಧರಿ ಜಮಾನ್ ಗುಜ್ಜರ್ ಅವ್ರು ನಿಶ್ತಾರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಶವಾಗಾರಕ್ಕೆ ಹೋಗಿ ಪರೀಕ್ಷೆ ಮಾಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ಮುಖ್ಯಮಂತ್ರಿ ಶವಾಗಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುಮಾರು 200 ಕೊಳೆತ ಶವ ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ.