International

ಗೂಗಲ್‌ ಮೀರಿಸಿದ ಟಿಕ್‌ ಟಾಕ್

ಸ್ಯಾನ್‌ಫ್ರಾನ್ಸಿಸ್ಕೋ : ತಂತ್ರಜ್ಞಾನದ ಮಹಾಭಂಡಾರ ಎನಿಸಿಕೊಂಡಿರುವ ಗೂಗಲ್‌ ಅನ್ನು ಸಹ ಟಿಕ್‌ ಟಾಕ್‌ ಹಿಂದಿಕ್ಕಿದೆ ಎಂದು ವರದಿಯಾಗಿದೆ. ಐಟಿ ಭದ್ರತಾ ಕಂಪನಿ ʼಕ್ಲೌಡ್‌ ಫ್ಲೇರ್‌ʼ ಪ್ರಕಾರ್‌ ಗೂಗಲ್‌ ಸರ್ಚ್‌ ಎಂಜಿನ್‌ಕಿಂತಲೂ  ಟಿಕ್‌ ಟಾಕ್‌ ಅತಿ ಹೆಚ್ಚು ಹಿಟ್ಸ್‌ ಪಡೆದಿರುವ ವೆಬ್‌ಸೈಟ್‌ ಆಗಿದೆ.

ಭಾರತದಲ್ಲಿ ಟಿಕ್‌ ಟಾಕ್‌ ಭಾರಿ ಜನಪ್ರಿಯತೆ ಪಡೆದಿತ್ತು. ಆದರೆ ಸೆಕ್ಯೂರಿಟಿ ಕಾರಣಗಳಿಂದ ಟಿಕ್‌ಟಾಕ್‌ ಅನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿತ್ತು.  ಗೂಗಲ್‌ ಸರ್ಚ್ ಎಂಜಿನ್‌ ಅನ್ನು ಟಿಕ್‌ ಟಾಕ್‌ ಹಿಂದಿಕ್ಕಿದೆ ಎಂದು ಬಿಬಿಸಿ ನ್ಯೂಸ್‌ ಕೂಡ ವರದಿ ಮಾಡಿದೆ.

ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ, ಮಾರ್ಚ್‌ ಹಾಗೂ ಜೂನ್‌ ನಲ್ಲಿ ಗೂಗಲ್‌ ಸನ್ನು ಅಗ್ರಸ್ಥಾನದಿಂದ ಕೆಳಗಿಳಿಸಿರುವ ಟಿಕ್‌ಟಾಕ್‌ ಪ್ರಾಬಲ್ಯ ಸಾಧಿಸಿತ್ತು. ಕೊರೊನಾ ಬಂದಿದ್ದರಿಂದಲೇ ಟಿಕ್‌ಟಾಕ್‌ ಖ್ಯಾತಿ ಹೆಚ್ಚಾಗಿತ್ತು.

ಗೂಗಲ್‌ ಬಿಟ್ಟರೆ ಟಿಕ್‌ ಟಾಕ್‌, ಮೈಕ್ರೊಸಾಫ್ಟ್‌, ಅಮೆಜಾನ್‌, ಆಪಲ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಂ ಟಾಪ್‌ ೧೦ರಲ್ಲಿ ಸ್ಥಾನ ಪಡೆದಿದ್ದವು.

Share Post