International

ರಷ್ಯಾ ಕರಾವಳಿ ತೀರ ಪ್ರದೇಶದಲ್ಲಿ ಪರಮಾಣು ಡ್ರಿಲ್:‌ ಅಣ್ವಸ್ತ್ರ ಪ್ರಯೋಗಿಸಲು ಪುಟಿನ್‌ ಪ್ಲಾನ್

ರಷ್ಯಾ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೊಂದು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ರಷ್ಯಾದ ಕರಾವಳಿ ಪ್ರದೇಶದಲ್ಲಿ ಪರಮಾಣು ಡ್ರಿಲ್‌ ಮಾಡಲು ಆದೇಶಗಳನ್ನು ನೀಡಲಾಗಿದೆ. ರಷ್ಯಾದ ಜಲಾಂತರ್ಗಾಮಿ ನೌಕೆಗಳು ಈಗಾಗಲೇ ಸಮುದ್ರದಲ್ಲಿ ಕಾರ್ಯತಂತ್ರದ ಪ್ರದೇಶಗಳನ್ನು ತಲುಪಿವೆ ಎಂದು ಮಾಹಿತಿ ಲಭ್ಯವಾಗಿದೆ. ಹಲವಾರು ಪರಮಾಣು ಜಲಾಂತರ್ಗಾಮಿ ನೌಕೆಗಳು ರಷ್ಯಾದ ಪರಮಾಣು  ಅಭ್ಯಾಸದಲ್ಲಿ ತೊಡಗಿಕೊಂಡಿವೆ. ರಷ್ಯಾ ಸೈನ್ಯವು ಸೈಬೀರಿಯಾದ ಹಿಮಭರಿತ ಕಾಡುಗಳಲ್ಲಿ ಮೊಬೈಲ್ ಲಾಂಚರ್‌ಗಳನ್ನು ನಿಯೋಜಿಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲು ಬೇಕಾದ ಲಾಂಚರ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ರಷ್ಯಾದ ಉತ್ತರ ನೌಕಾಪಡೆ ಅಧಿಕೃತವಾಗಿ ಘೋಷಿಸಿದೆ.

ಪ್ರಪಂಚದಾದ್ಯಂತ ಕಠಿಣ ನಿರ್ಬಂಧಗಳ ಹೊರತಾಗಿಯೂ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧ ಎಂದು ಪುಟಿನ್ ಈಗಾಗಲೇ ಘೋಷಿಸಿದ್ದಾರೆ. ಪುಟಿನ್ ಪರಮಾಣು ಪರೀಕ್ಷೆಯಲ್ಲಿ ತೊಡಗಿರುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಜಗತ್ತು ಪದೇ ಪದೇ ಎಚ್ಚರಿಸಿದೆ. ಆದರೂ ಪುಟಿನ್ ಸ್ವಲ್ಪವೂ ಹೆದರದೆ ಉಕ್ರೇನ್ ಮೇಲೆ ತನ್ನ ಮಿಲಿಟರಿಯನ್ನು ಅಟ್ಯಾಕ್‌ ಅನ್ನು ತೀವ್ರಗೊಳಿಸಿದೆ.

ಶರಣಾಗುವಂತೆ ಉಕ್ರೇನ್ ಎಚ್ಚರಿಕೆ ನೀಡಿದರೂ ಪ್ರತಿರೋಧ ತೋರುತ್ತಲೇ ಇರುವ ಕಾರಣದಿಂದಾಗಿ ಪುಟಿನ್ ಕೊನೆಯ ಅವಕಾಶವಾಗಿ ಪರಮಾಣು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವಂತಿದೆ. ಪರಮಾಣು ಕಸರತ್ತು ನಡೆಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

 

Share Post