ಸೈಕಲ್ ತುಳಿ, ಜ್ಯೂಸ್ ಕುಡಿ: ವೆರೈಟಿ ಜ್ಯೂಸ್ ಶಾಪ್
ಗುಜರಾತ್: ಸಾಮಾನ್ಯವಾಗಿ ಎಲ್ಲಾ ಕಡೆ ಜ್ಯೂಸ್ ಅಂಗಡಿ ಇರುತ್ತೆ. ನಮಗೆ ಬೇಕಾದ ಹಣ್ಣಿನ ರಸವನ್ನು ಆರ್ಡರ್ ಮಾಡುದ್ರೆ ಸಾಕು ಅಲ್ಲಿರುವ ವೇಟರ್ ನಮಗೆ ಸರ್ವ್ ಮಾಡ್ತಾನೆ, ಆದ್ರೆ ನಮಗೇನು ಲಾಭ ಜ್ಯೂಸ್ ಕುಡಿದು ಕುಡಿದು ದೇಹ ಊದಿಸಿಕೊಳ್ಳುವ ಕೆಲಸ ಅಷ್ಟೇ.
ವೈದ್ಯರು ಜ್ಯೂಸ್ ಕುಡಿಯಿರಿ ಅಂದಾಕ್ಷಣ ಲೀಟರ್ ಗಟ್ಟಲೆ ಕುಡಿಯೋದಲ್ಲ. ಕಷ್ಟಪಟ್ಟು ಕೆಲಸ, ವರ್ಕೌಟ್ ಮಾಡಿ ಕುಡಿದ್ರೆ ಅದಕ್ಕೊಂದು ಅರ್ಥ ಜೀರ್ಣಕ್ರಿಯೆ ಕೂಡ ಸುಲಭವಾಗುತ್ತೆ. ಇದನ್ನರಿತ ಯುವಕನೋರ್ವ ಅಹಮಾದಾಬಾದ್‌ನಲ್ಲಿ ಒಂದು ಹಣ್ಣಿನ ಅಂಗಡಿಯನ್ನು ತೆರೆದಿದ್ದಾನೆ.
ಇಲ್ಲಿ ಜ್ಯೂಸ್ ಬೇಕಂದ್ರೆ ನೀವೇ ಕಷ್ಟಪಟ್ಟು ವರ್ಕೌಟ್ ಮಾಡಿ ರಸ ಹಿಂಡಿ ಜ್ಯೂಸ್ ತೆಗೆಯಬೇಕು. ನಿಔಉ ಮಾಡಬೇಕಾಗಿರುವುದು ಇಷ್ಟೇ ʻಗ್ರೀನ್ ಬಾರ್ʼ ಜ್ಯೂಸ್ ಶಾಪ್‌ಗೆ ಹೋದ್ರೆ ನೀವು ಕೇಳಿದ ಹಣ್ಣನ್ನು ಜೊತೆಗೆ ಬೇಕಾದ ಪದಾರ್ಥಗಳೊಂದಿಗೆ ಸೈಕಲ್ ಮುಂದಿರುವ ಮಿಕ್ಸಿ ಜಾರಿಗೆ ಹಾಕುತ್ತಾರೆ. ಆದ್ರೆ ರಸ ಮಾತ್ರ ನೀವೇ ತೆಗೆಯಬೇಕು. ಸೈಕಲ್ ಫೆಡಲ್ ಮೇಲೆ ಕಾಲಿಟ್ಟು ತುಳಿಯಬೇಕು ನೀವು ತುಳಿಯುವ ರಭಸಕ್ಕೆ ಹಣ್ಣು ರಸವಾಗಿ ಮಾರ್ಪಾಡಾಗುತ್ತೆ ನಿಮಗೆ ಬೇಕಾದಷ್ಟು ಜ್ಯೂಸ್ ಕುಡಿಯಬಹುದು.
ಇಲ್ಲಿಗೆ ಬರುವವರು ಜ್ಯೂಸ್ ಜೊತೆಗೆ ವರ್ಕೌಟ್ ಕೂಡ ಆಗುತ್ತದೆ ಆರೋಗ್ಯವೂ ಚನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.