CrimeInternational

10 ವರ್ಷದಿಂದ ನಿರಂತರ ಸಾಮೂಹಿಕ ಅತ್ಯಾಚಾರ!; ವಿಡಿಯೋ ಚಿತ್ರೀಕರಿಸುತ್ತಿದ್ದ ಗಂಡ!

ಪ್ಯಾರಿಸ್(Paris); ಮದುವೆಯಾದ ವ್ಯಕ್ತಿಯೇ ಪರ ಪುರುಷರನ್ನು ಕರೆದುಕೊಂದು ಬಂದು ತನ್ನ ಪತ್ನಿ ಮೇಲೆ ಅತ್ಯಾಚಾರ ಎಸಗುವಂತೆ ಮಾಡುತ್ತಿದ್ದ ದಾರುಣ ಘಟನೆ ಬೆಳಕಿಗೆ ಬಂದಿದೆ.. ಪತ್ನಿಗೆ ಪಾನೀಯ ಹಾಗೂ ಆಹಾರದಲ್ಲಿ ಮತ್ತು ಬರುವ ಔಷಧಿ ಅಥವಾ ಡ್ರಗ್ಸ್‌ ನೀಡಿ ನಂತರ ಸಾಮೂಹಿಕ ಅತ್ಯಾಚಾರವೆಸಗಲಾಗುತ್ತಿತ್ತು.. ಹೀಗೆ ಹತ್ತು ವರ್ಷಗಳಿಂದ ನಿರಂತರ ಅತ್ಯಾಚಾರ ಮಾಡಲಾಗಿದ್ದು, ಗಂಡನೇ ಅದರ ವಿಡಿಯೋಗಳನ್ನು ಮಾಡಿಟ್ಟುಕೊಂಡಿದ್ದ ಎಂದು ಗೊತ್ತಾಗಿದೆ..

ಇದನ್ನೂ ಓದಿ; ಯಶವಂತಪುರ ಫ್ಲೈಓವರ್‌ನಿಂದ ಹಾರಿ ಕೆಳಗೆ ಬಿದ್ದ ಕಾರು!

ದಕ್ಷಿಣ ಫ್ರಾನ್ಸ್‌ ನಲ್ಲಿ ಈ ಘಟನೆ ನಡೆದಿದೆ.. ಮಹಿಳೆಯ ಕೂದಲು ಉದುರಲಾರಂಭಿಸಿದ್ದವು.. ಜೊತೆಗೆ ದಿನೇದಿನೇ ತೂಕ ಕಳೆದುಕೊಳ್ಳುತ್ತಿದ್ದಳು.. ಕೆಲವೊಮ್ಮೆ ಕನಸನಲ್ಲಿದ್ದಂತೆ ಆಕೆ ಕಾಣಿಸುತ್ತಿದ್ದಳು.. ಹೀಗಾಗಿ ಆಕೆಗೆ ಮರೆವಿನ ಕಾಯಿಲೆ ಇರಬಹುದು ಎಂದು ಆಕೆಯ ಮಕ್ಕಳು ಹಾಗೂ ಸ್ನೇಹಿತರಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.. ಚಿಕಿತ್ಸೆ ವೇಳೆ ಮಹಿಳೆ ಎಲ್ಲಾ ವಿಚಾರವನ್ನೂ ಬಾಯ್ಬಿಟ್ಟಿದ್ದಾಳೆ.. ನನ್ನ 50 ವರ್ಷದ ಪತಿ ಡೊಮಿನಿಕ್‌ ಪೆಲಿಕಾಟ್‌ ಎಂಬಾತ ನಿತ್ಯ ನನಗೆ ಡ್ರಗ್ಸ್‌ ಅಥವಾ ಮತ್ತು ಬರುವ ಪಾನೀಯ ನೀಡುತ್ತಿದ್ದ.. ಅನಂತರ ಆತ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ.. ಸಾಲದೆಂಬಂತೆ ಹತ್ತಾರು ಗಂಡಸರನ್ನು ಕರೆತಂದು ನನ್ನ ಮೇಲೆ ರೇಪ್‌ ಮಾಡಿಸುತ್ತಿದ್ದ.. ಅದನ್ನು ಚಿತ್ರೀಕರಣ ಮಾಡಿಕೊಂಡು ಇಟ್ಟುಕೊಳ್ಳುತ್ತಿದ್ದ ಎಂದು ಆಕೆ ಹೇಳಿಕೊಂಡಿದ್ದಾಳೆ..

ಇದನ್ನೂ ಓದಿ; Breaking – ಪ್ರಾಸಿಕ್ಯೂಷನ್‌ ಕೇಸ್‌; ಸಿದ್ದರಾಮಯ್ಯಗೆ ರಿಲೀಫ್‌

ದಶಕದಿಂದ ಈ ಕೃತ್ಯವನ್ನು ನಿರಂತರವಾಗಿ ಎಸಗಲಾಗುತ್ತಿತ್ತು ಎಂದು ತಿಳಿದುಬಂದಿದೆ.. ಮಹಿಳೆ ಮೇಲೆ ಸುತ್ತಮುತ್ತಲಿನ ಕಾರ್ಮಿಕರು, ಸೈನಿಕರು, ಟ್ರಕ್‌ ಚಾಲಕರು, ಬಡಗಿಗಳು, ನರ್ಸ್‌ಗಳು, ಬ್ಯಾಂಕ್‌ ಸಿಬ್ಬಂದಿ ಹಾಗೂ ಪತ್ರಕರ್ತರು ಕೂಡಾ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.. ಕೆಲವರು ಹಲವಾರು ಬಾರಿ ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾರೆ.. ಆರೋಪಿ ಗಂಡ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.. ಇನ್ನು ಬಂಧಿತ ಆರೋಪಿಗಳಲ್ಲಿ ಕೆಲವರು ಮಹಿಳೆ ಮೇಲೆ ಅತ್ಯಾಚಾರ ಎಸಗೋದಕ್ಕೆ ಆಕೆಯ ಗಂಡನೇ ಹೇಳಿದ್ದ ಎಂಬ ಆಘಾತಕಾರಿ ವಿಚಾರವನ್ನು ಬಾಯ್ಬಿಟ್ಟಿದ್ದಾನೆ..

Share Post