ಐ ಲವ್ ಯು ಹೇಳಿದ್ರೆ ಮಾತ್ರ ರೀಚಾರ್ಜ್ ಮಾಡ್ತಾನಂತೆ ಇವನು!; ಬಿತ್ತು ನೋಡಿ ಗೂಸಾ!
ದಿದ್ವಾನಾ(Rajasthan); ಮೊಬೈಲ್ ರೀಚಾರ್ಜ್ ಮಾಡಬೇಕಂದ್ರೆ ಈ ಅಂಗಡಿಯವನಿಗೆ ಐ ಲವ್ ಯೂ ಹೇಳಬೇಕಂತೆ.. ಇಲ್ಲದಿದ್ದರೆ ಹಣ ಕೊಟ್ಟರೂ ರೀಚಾರ್ಜ್ ಮಾಡಲ್ಲವಂತೆ.. ಬಂದ ಬಂದ ಹುಡುಗಿಯರಿಗೆಲ್ಲಾ ಐ ಲವ್ ಯೂ ಹೇಳು ಎಂದು ಪೀಡಿಸುತ್ತಿದ್ದ ಮೊಬೈಲ್ ಅಂಗಡಿ ಮಾಲೀಕನನ್ನು ಹಿಡಿದ ಯುವತಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಕಪಾಳಕ್ಕೆ ಹೊಡೆದು, ಬೀದಿಯಲ್ಲೆಲ್ಲಾ ಎಳೆದಾಡಿ ಬುದ್ಧಿ ಕಲಿಸಿದ್ದಾರೆ.. ರಾಜಸ್ಥಾನದ ದಿದ್ವಾನಾ ಎಂಬಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ರೆಸಾರ್ಟ್‌ನಲ್ಲಿ ಪತಿ ಮರ್ಮಾಂಗಕ್ಕೆ ಕಚ್ಚಿದ ಚೇಳು!; ಕಣ್ಣೀರಿಟ್ಟ ಪತ್ನಿ!
ದಿದ್ವಾನಾದ ಶಾಲೆಯೊಂದರ ಯುವಕ ಮೊಬೈಲ್ ರೀಚಾರ್ಜ್ ಅಂಗಡಿ ಇಟ್ಟುಕೊಂಡಿದ್ದಾನೆ.. ಶಾಲೆಯ ವಿದ್ಯಾರ್ಥಿನಿಯರು ಯಾವಾಗಲೂ ಇಲ್ಲೇ ರೀಚಾರ್ಜ್ ಮಾಡಿಸುತ್ತಿದ್ದರು.. ಈ ವೇಳೆ ಆತ ಹುಡುಗಿಯರ ಜೊತೆ ಸಲುಗೆ ಬೆಳೆಸಿದ್ದ.. ಅದನ್ನೇ ದುರುಪಯೋಗ ಮಾಡಿಕೊಂಡ ಆರೋಪಿ, ಐ ಲವ್ ಯೂ ಹೇಳುವಂತೆ ವಿದ್ಯಾರ್ಥಿನಿಯರನ್ನು ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಆತ ನಡುರಸ್ತೆಗೆ ಎಳೆದು ತಂದಿದ್ದಾರೆ.. ಎಲ್ಲರ ಎದುರೇ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ..
ಇದನ್ನೂ ಓದಿ; 10 ವರ್ಷದಿಂದ ನಿರಂತರ ಸಾಮೂಹಿಕ ಅತ್ಯಾಚಾರ!; ವಿಡಿಯೋ ಚಿತ್ರೀಕರಿಸುತ್ತಿದ್ದ ಗಂಡ!