International

RUSSIA-UKRAINE WAR; ಕೀವ್‌ ನಗರ ವಶಕ್ಕೆ ರಷ್ಯಾ ಸೇನೆ ಹರಸಾಹಸ; ವಿಶ್ವದ ಅತಿದೊಡ್ಡ ವಿಮಾನ ಉಡೀಸ್‌

ಕೀವ್‌; ಉಕ್ರೇನ್‌ನಲ್ಲಿ ರಷ್ಯಾ ದಾಳಿ ಮುಂದುವರೆಸಿದೆ. ಕಿವ್‌, ಖಾರ್ಕಿವ್‌ ನಗರಗಳಲ್ಲಿ ರಷ್ಯಾ ಸೈನಿಕರು ದಾಳಿ ನಡೆಸುತ್ತಿದ್ದಾರೆ. ಈ ನಡುವೆ ವಿಶ್ವದ ಅತಿದೊಡ್ಡ ವಿಮಾನ, ಉಕ್ರೇನ್‌ನ ‘ಆಂಟೊನೊವ್-225’ ಸರಕು ವಿಮಾನವನ್ನು ರಷ್ಯಾದ ಸೇನಾ ಪಡೆಗಳು ಕೀವ್‌ ಹೊರವಲಯದಲ್ಲಿ ನಾಶ ಮಾಡಿವೆ ಎಂದು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ, ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ‘ಉಕ್ರೊಬೊರಾನ್‌ಪ್ರೊಮ್’ ಹೇಳಿದೆ.

ಇನ್ನು ಕೀವ್‌ ನಗರ ಉಕ್ರೇನ್‌ ನಿಯಂತ್ರಣದಲ್ಲಿದೆ. ಅದನ್ನು ಆಕ್ರಮಿಸಿಕೊಳ್ಳುವ ರಷ್ಯಾದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಉಕ್ರೇನ್‌ ಸರ್ಕಾರ ಹೇಳಿಕೊಂಡಿದೆ. ಈ ನಡುವೆ ರಷ್ಯಾ ಮಿಲಿಟರಿ ಪಡೆ ಕೀವ್‌ ನಗರವನ್ನು ವಶಪಡಿಸಿಕೊಳ್ಳಲು ಸಕಲ ಪ್ರಯತ್ನಗಳನ್ನೂ ಮುಂದುವರೆಸಿದೆ.

Share Post