EconomyInternational

ಕೇರಳದ ವ್ಯಕ್ತಿಗೆ ದುಬೈನಲ್ಲಿ ಬಂಪರ್‌ ಜಾಕ್‌ಪಾಟ್‌; 45 ಕೋಟಿ ರೂ. ಲಾಟರಿ ಬಹುಮಾನ

ತಿರುವನಂತಪುರಂ; ಆ ವ್ಯಕ್ತಿ ಉದ್ಯೋಗ ಅರಸಿ ದುಬೈಗೆ ಹೋಗಿದ್ದ. ಕುಟುಂಬವನ್ನು ಸಲಹುವಷ್ಟು ಹಣ ಸಂಪಾದನೆಯಾದರೆ ಸಾಕು ಅನ್ನೋದು ಆಸೆಯಷ್ಟೇ ಆತನಿಗಿತ್ತು. ಆದ್ರೆ ಆತ ಈಗ ಕೋಟ್ಯಧಿಪತಿ. ದುಬೈನಲ್ಲಿ ಇದೇ ವ್ಯಕ್ತಿ ಲಾಟರಿ ಟಿಕೆಟ್‌ ಒಂದನ್ನು ಖರೀದಿ ಮಾಡಿದ್ದು, ಅದಕ್ಕೆ ಬರೋಬ್ಬರಿ 45 ಕೋಟಿ ರೂಪಾಯಿ ಬಂಪರ್‌ ಲಾಟರಿ ಹೊಡೆದಿದೆ.

39 ವರ್ಷದ ಶ್ರೀಜು ಎಂಬಾತನಿಗೆ ಈ ಬಂಪರ್‌ ಜಾಕ್‌ಪಾಟ್‌ ಹೊಡೆದಿದೆ. ಆಯಿಲ್ ಅಂಡ್ ಗ್ಯಾಸ್​ ಇಂಡಸ್ಟ್ರಿಯಲ್ಲಿ ಕಂಟ್ರೋಲ್ ರೂಮ್ ಆಪರೇಟರ್ ಆಗಿ ಶ್ರೀಜು ಕೆಲಸ ಮಾಡುತ್ತಿದ್ದರು. ಅವರಿಗೆ ಆಗಾಗ ಲಾಟರಿ ಟಿಕೆಟ್‌ ಕೊಂಡು ಅದೃಷ್ಟ ಪರೀಕ್ಷೆ ಮಾಡುವ ಹವ್ಯಾಸವಿತ್ತು. ಹನ್ನೊಂದು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿರುವ ಶ್ರೀಜು ಈಗ ಇದ್ದಕ್ಕಿದ್ದಂತೆ ಕೋಟ್ಯಧಿಪತಿಯಾಗಿದ್ದಾರೆ.

 

Share Post