International

ಸುಮಿ ನಗರ ಬಿಟ್ಟ ಭಾರತೀಯ ವಿದ್ಯಾರ್ಥಿಗಳು; ರಾಯಭಾರ ಕಚೇರಿ ವಿರುದ್ಧ ಆಕ್ರೋಶ

ಕೀವ್‌; ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಗಡಿಯತ್ತ ತೆರಳುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿಯವರು ನೆರವಾಗುತ್ತಿಲ್ಲ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ನಮಗೆ ಏನಾದರೂ ಆದರೆ ಅದಕ್ಕೆ ನೀವೇ ಕಾರಣ ಎಂದು ಹೇಳಿ ವಿಡಿಯೋವೊಂದರನ್ನು ಬಿಡುಗಡೆ ಮಾಡಿದ್ದಾರೆ.

700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸುಮಿ ನಗರದ ಬಂಕರ್‌ಗಳಲ್ಲಿ ಅಡಗಿಕೊಂಡಿದ್ದರು. ಆದ್ರೆ, ಭಾರತಕ್ಕೆ ವಾಪಸ್ಸಾಗಲು ಯಾವುದೇ ಸಹಕಾರ ಸಿಕ್ಕಿಲ್ಲ. ಹೀಗಾಗಿ, ನಾವೇ ಗಡಿಯತ್ತ ಹೊರಟಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಭಾರತ ಸರ್ಕಾರ ರಷ್ಯಾ ಹಾಗೂ ಉಕ್ರೇನ್‌ ಸರ್ಕಾರದ ಸಹಕಾರ ಕೋರಿದೆ. ಸುಮಿ ನಗರದಲ್ಲೂ ಕದನ ವಿರಾಮ ಘೋಷಣೆ ಮಾಡಿ, ನಮ್ಮ ವಿದ್ಯಾರ್ಥಿಗಳನ್ನ ಭಾರತಕ್ಕೆ ಕರೆದುಕೊಂಡು ಹೋಗಲು ಸಹಕರಿಸಿ ಎಂದು ಮನವಿ ಮಾಡಿದೆ.

Share Post