ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ; ತಿಳಿಯದೇ ಮಾಡಿದ ತಪ್ಪಿಗೆ ಪ್ರಾಣವೇ ಹೋಯ್ತು
ಮಂಗಳೂರು: ಟೂತ್ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ. ಶ್ರಾವ್ಯ (22) ಎಂಬಾಕೆಯೇ ಸಾವನ್ನಪ್ಪಿರುವ ಯುವತಿ. ಮನೆಯ ಬಾತ್ ರೂಮ್‌ನ ಕಿಟಕಿಯಲ್ಲಿ ಟೂತ್ ಪೇಸ್ಟ್ ಇಡಲಾಗುತ್ತಿತ್ತು. ಅದರ ಪಕ್ಕದಲ್ಲೇ ಮನೆಯವರೇ ಇಲಿ ಪಾಷಾಣವನ್ನೂ ಇಟ್ಟಿದ್ದಾರೆ. ಆದ್ರೆ ಬಾತ್ ರೂಂನಲ್ಲಿ ಕತ್ತಲಿದ್ದರಿಂದ ಶ್ರಾವ್ಯ ಟೂತ್ ಪೇಸ್ಟ್‌ಗೆ ಬದಲಾಗಿ ಇಲಿ ಪಾಷಾಣವನ್ನು ಬ್ರಷ್‌ಗೆ ಹಾಕಿಕೊಂಡಿದ್ದಾರೆ.
ಇಲಿ ಪಾಷಾಣದಲ್ಲೇ ಹಲ್ಲುಜ್ಜಿದ್ದಾರೆ. ಇದರಿಂದ ಶ್ರಾವ್ಯಾ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಶ್ರಾವ್ಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.