International

RUSSIA-UKRAINE WAR: ಎರಡು ಪ್ರದೇಶಗಳಲ್ಲಷ್ಟೇ ಕದನ ವಿರಾಮ..!

ಕೀವ್‌; ಬೆಲಾರಸ್‌ನಲ್ಲಿ ಮಾರ್ಚ್‌ ೩ ರಂದು ನಡೆದ ಮಾತುಕತೆ ಹಿನ್ನೆಲೆಯಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ. ಅದೂ ಕೂಡಾ ಇವತ್ತು ಎರಡು ನಗರಗಳಲ್ಲಿ  ಮಾತ್ರ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ. 

ಮರಿಯುಪೋಲ್‌, ವೋಲ್ನೋವೋಕಾ ನಗರಗಳಲ್ಲಿ ಕೇವಲ ಆರು ಗಂಟೆಗಳ ಕಾಲ ಮಾತ್ರ ತಾತ್ಕಾಲಿಕ ವಿರಾಮ ಘೋಷಣೆ ಮಾಡಲಾಗಿದೆ. ಅಷ್ಟರೊಳಗೆ ಅಲ್ಲಿರುವ ನಾಗರಿಕರು ಬೇರೆಡೆ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ. ದಿನಕ್ಕೆರಡು ಪ್ರದೇಶಗಳಲ್ಲಿ ಕದನ ವಿರಾಮ ಘೊಷಣೆ ಮಾಡಲಾಗುತ್ತಿದೆ. ಒಂದು ದಿನ ಸಮಯದಲ್ಲಿ ಅಲ್ಲಿಯುವ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ರಷ್ಯಾ ಹೇಳಿದೆ.

ಔಷಧಿ, ಆಹಾರ ಪೂರೈಕೆ ಹಾಗೂ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಷ್ಯಾ ಹೇಳಿದೆ.

 

Share Post