National

ಪ್ರಯಾಣಿಕರ ಚಾಕಚಕ್ಯತೆ: ಧಗಧಗ ಉರಿಯುತ್ತಿದ್ದ ರೈಲನ್ನೇ ತಳ್ಳಿದ ಜನ-ವಿಡಿಯೋ ವೈರಲ್

ಉತ್ತರಪ್ರದೇಶ: ರೈಲನ್ನು ಎಲ್ಲಾದರೂ ಯಾವಗಲಾದರೂ ತಳ್ಳಿರುವುದನ್ನು ನೋಡಿದ್ದೀರಾ…?ನಾವು ಕೇಳುತ್ತಿರುವುದು ನಿಮಗೆ ಹುಚ್ಚು ಅನಿಸಿದ್ರೂ ಇದು ನಿಜ ಕಣ್ರೀ…ಬೆಂಕಿ ಹತ್ತಿ ಧಗಧಗ ಉರಿಯುತ್ತಿದ್ದ ಬೋಗಿಯನ್ನು ಬಿಟ್ಟ ಉಳಿದ ಬೋಗಿಗಳನ್ನು ರಕ್ಷಿಸುವ ಸಲುವಾಗಿ ರೈಲನ್ನೇ ಪ್ರಯಾಣಿಕರು ತಳ್ಳಿರುವ ಘಟನೆ  ಉತ್ತರಪ್ರದೇಶದ ದೌಲಾರಾ ರೈಲ್ವೆ ಸ್ಟೇಷನ್‌ನಲ್ಲಿ ನಡೆದಿದೆ.

ಕಾರು, ಬಸ್‌, ಲಾರಿ, ಟೆಂಪೋಗಳು ಸ್ಟಾರ್ಟ್‌  ಆಗದ ವೇಳೆ ತಳ್ಳುವುದು ರೈಲು ತಳ್ಳಿರುವುದನ್ನು ನೋಡಿದ್ದು, ಕೇಳಿದ್ದು ಇದೇ ಮೊದಲು ಇರಬೇಕಲ್ಲವೇ..? ಸಹರಾನ್‌ಪುರದಿಂದ ದೆಹಲಿಗೆ ತೆರಳುತ್ತಿದ್ದ ರೈಲು ದೌಲಾರಾ ರೈಲ್ವೆ ನಿಲ್ದಾಣದಲ್ಲಿ  ನಿಂತಿದೆ. ಈ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಎಂಜಿನ್‌ ಹಾಗೂ ಮತ್ತೆರೆಡು ಕಂಪಾಟ್‌ಮೆಂಟ್‌ಗಳಿಗೆ ಬೆಂಕಿ ಹರಡಿದೆ. ಕೂಡಲೇ ಎಂಜಿನ್‌ ಅನ್ನು ಇತರೆ ಬೋಗಿಗಳಿಂದ ಬೇರ್ಪಡಿಸಿದರೂ ಕೂಡ ಎರಡು ಬೋಗಿಗಳಿಗೆ ತಗುಲಿರುವ ಬೆಂಕಿ ವ್ಯಾಪಿಸಬಹುದು ಎಂದು ಶಂಕಿಸಿ ಪ್ರಯಾಣಿಕರು ರೈಲನ್ನು ತಳ್ಳಿರುವ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

ಅಗ್ನಿ ಅನಾಹುತದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ರೈಲು ನಿಂತಿದ್ದರಿಂದ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಉಂಟಾಗಬಹುದಾದ ದುರಂತವನ್ನು ತಪ್ಪಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ಎಲ್ಲರ ಮೆಚುಗೆಗೆ ಪಾತ್ರರಾಗಿದ್ದಾರೆ.

Share Post