International

ಶಾಲೆ ಮೇಲೆ ರಷ್ಯಾ ಬಾಂಬ್‌ ದಾಳಿ: 21 ಮಂದಿ ಸಾವು, 25ಜನರಿಗೆ ಗಂಭೀರ ಗಾಯ

ಉಕ್ರೇನ್:‌ ವಿಶ್ವದ ವಿರೋಧದ ನಡುವೆಯೂ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಇದರ ಭಾಗವಾಗಿ ರಷ್ಯಾ ಪಡೆಗಳು ಶಾಲೆಯ ಮೇಲೆ ದಾಳಿ ನಡೆಸಿ 21 ಮಂದಿ ಪ್ರಾಣ ತೆಗೆದ ದಾರುಣ ಘಟನೆ ನಡೆದಿದೆ. ರಷ್ಯಾದ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, ಕನಿಷ್ಠ 25 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾ ಸೇನೆ ಗುರುವಾರ (ಮಾರ್ಚ್ 17, 2022) ಪೂರ್ವ ಉಕ್ರೇನ್‌ಗೆ ಮನಬಂದಂತೆ ಗುಂಡು ಹಾರಿಸಿದ್ದು, ಖಾರ್ಕಿವ್ ಬಳಿಯ ಮೆರಿಫಾ ಪಟ್ಟಣದಲ್ಲಿರುವ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಈ ಶೀತಲ ಸಮರದಲ್ಲಿ 21 ಜನರು ಸಾವನ್ನಪ್ಪಿದ್ದು, 25 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಖಾರ್ಕಿವ್‌ನ ಉಪನಗರ ಮೆರೆಫಾ ಪಟ್ಟಣ ರಷ್ಯಾ ದಾಳಿಗೆ ತುತ್ತಾಗಿದೆ. ಉಕ್ರೇನಿಯನ್ ರಾಜಧಾನಿ ಕೀವ್ ನಂತರ ಎರಡನೇ ದೊಡ್ಡ ನಗರವಾದ ಖಾರ್ಕಿವ್ ಧ್ವಂಸಗೊಂಡಂತೆ ಕಾಣುತ್ತಿದೆ. ಕುಸಿದು ಬಿದ್ದ ಕಟ್ಟಡಗಳು, ಬಾಂಬ್‌ ದಾಳಿಗಳಿಂದ ಹೊತ್ತಿ ಉರಿಯುತ್ತಿವೆ. ರಸ್ತೆಗಳು, ಗಿಡ, ಮರಗಳು ಸಂಪೂರ್ಣ ನಅಶವಾಗಿ ಎಲ್ಲಾ ಕಡೆ ದಟ್ಟ ಹೊಗೆ ಆವರಿಸಿ ಕಗ್ಗತ್ತಲಿನ ಹಾಗೆ ಕಾಣುತ್ತಿದೆ.

Share Post